ನವದೆಹಲಿ, ಅ.14 (DaijiworldNews/PY): ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ ಬಂಧಿತರಾಗಿ ವೈದ್ಯಕೀಯ ಆಧಾರದ ಮೇಲೆ ಜಾಮೀನು ಪಡೆದಿರುವ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಅವರು ಮಹಿಳೆಯರೊಂದಿಗೆ ಕಬ್ಬಡ್ಡಿ ಆಡಿ ಗಮನ ಸೆಳೆದಿದ್ದಾರೆ.

ಭೂಪಾಲ್ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಿಂಗ್ ಅವರು ವಿಶ್ವ ಪ್ರಸಿದ್ದ ಕಾಳಿ ದೇವಾಲಯಕ್ಕೆ ತೆರಳಿದ್ದರು. ಈ ವೇಳೆ ಕ್ರೀಡಾಂಗಣದಲ್ಲಿ ಕಬಡ್ಡಿ ಆಡುತ್ತಿದ್ದ ಯುವತಿಯರು ತಮ್ಮೊಂದಿಗೆ ಕಬಡ್ಡಿ ಆಡುವಂತೆ ಮನವಿ ಮಾಡಿಕೊಂಡಾಗ ಪ್ರಗ್ಯಾ ಸಿಂಗ್ ಅವರು ಕೇಸರಿ ರುಮಾಲು ಸುತ್ತಿ ಅಂಕಣಕ್ಕಿಳಿದು ಕಬ್ಬಡಿ ಆಡುತ್ತಿರುವ ದೃಶ್ಯ ವೈರಲ್ ಆಗಿವೆ.
ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಪ್ರಗ್ಯಾ ಅವರು ಬಾಸ್ಕೆಟ್ ಬಾಲ್ ಆಡುವುದು ಹಾಗೂ ನೃತ್ಯ ಮಾಡುತ್ತಿರುವ ದೃಶ್ಯ ಈ ಹಿಂದೆ ವೈರಲ್ ಆಗಿದ್ದವು. ವೈದ್ಯಕೀಯ ಚಿಕಿತ್ಸೆಯ ಕಾರಣದಿಂದ ಜಾಮೀನು ಪಡೆದು ಹೊರಬಂದ ಬಳಿಕ ಅದೇ ಕಾರಣ ನೀಡಿ ಹಲವು ಬಾರಿ ವಿಚಾರಣೆಗ ಗೈರಾಗಿದ್ದ ಪ್ರಗ್ಯಾ ಈಗ ಕಬ್ಬಡಿ ಆಡುತ್ತಿರುವ ದೃಶ್ಯವನ್ನು ಕಾಂಗ್ರೆಸ್ ತನ್ನ ಅಸ್ತ್ರವನ್ನಾಗಿಸಿಕೊಂಡಿದೆ.
ಮಾಲೇಂಗಾವ್ನ ಮಸೀದಿ ಸಮೀಪ ಕಳೆದ 2008 ರಲ್ಲಿ ನಡೆದ ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟು, 100 ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಪ್ರಗ್ಯಾ ಅವರ ಕೈವಾಡವಿರುವುದು ಸಾಬೀತಾದ ಬಳಿಕ ಅವರು 9 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದರು.