ಕೊಪ್ಪಳ, ಅ.25 (DaijiworldNews/PY): ಚಹಾದಲ್ಲಿ ನಿದ್ರೆ ಮಾತ್ರೆ ಕೊಟ್ಟು ತನ್ನ ಸಿಬ್ಬಂದಿಯ ಮೇಲೆ ಇಟ್ಟಿಗೆಭಟ್ಟಿ ಮಾಲೀಕ ಅತ್ಯಾಚಾರ ಎಸಗಿರುವ ಘಟನೆ ಹಿರೇಬೆಣಕಲ್ ಗ್ರಾಮದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಹೇಶ ಎಂದು ಗುರುತಿಸಲಾಗಿದೆ.
ಮಹಿಳೆ ಕೆಲವು ತಿಂಗಳಿನಿಂದ ಹಿರೇಬೆಣಕಲ್ ಸಮೀಪದ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಳು. ಇಟ್ಟಿಗೆ ಬಟ್ಟಿ ಮಾಲೀಕನಾಗಿರುವ ಮಹೇಶ ಬೆಳಗ್ಗೆ 4 ಗಂಟೆಗೆ ಕೆಲಸದ ನೆಪದಲ್ಲಿ ಬಟ್ಟಿಗೆ ಬರಲು ಹೇಳಿದ್ದಾನೆ. ನಂತರ ಚಹಾದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟು ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.