ಮಧ್ಯಪ್ರದೇಶ, ಅ.25 (DaijiworldNews/HR): ತಾಯಿಯೊಬ್ಬಳು ತನ್ನ 3 ತಿಂಗಳ ಮಗಳನ್ನು ಹತ್ಯೆ ಮಾಡಿದ್ದು, ಈ ರಹಸ್ಯ ಗೂಗಲ್ ಮೂಲಕ ತಿಳಿದಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯ ಕಚ್ರೋಡ್ನಲ್ಲಿ ನಡೆದಿದೆ.

ಅಕ್ಟೋಬರ್ 12 ರಂದು ತಾಯಿ ತನ್ನ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ಬಳಿಕ ಮಗು ಕಾಣೆಯಾಗಿದೆ ಎಂದು ಮನೆಯವರಿಗೆ ತಿಳಿಸಿದ್ದಾಳೆ. ಮನೆಯವರೆಲ್ಲ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮಗು ಸಿಗದೇ ಇದ್ದಾಗ ಪೊಲೀಸ್ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಇನ್ನು ಪಕ್ರರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದು, 10 ದಿನಗಳ ಕಾಲ ಪ್ರತಿದಿನ ತಾಯಿ ಠಾಣೆಗೆ ತೆರಳಿ ಮಗು ಹುಡುಕಿಕೊಂಡುವಂತೆ ಕಣ್ಣೀರು ಹಾಕಿ ಮಗು ಸಿಗದೇ ಇದ್ದರೆ ನಾನು ಸತ್ತು ಹೋಗುತ್ತೇನೆ ಎಂದು ನಾಟಕವಾಡಿದ್ದಾಳೆ.
ಪೊಲೀಸರಿಗೆ ಮನೆಯವರ ಮೇಲೆ ಇರುವ ಅನುಮಾನದಿಂದ ಬಂದು ಮನೆಯಲ್ಲೇ ಹುಡುಕಾಟ ಮಾಡಿದ್ದಾರೆ. ಈ ವೇಳೆ ಮೂರನೇ ಅಂತಸ್ತಿನಲ್ಲಿರುವ ನೀರಿನ ಟ್ಯಾಂಕರ್ನಲ್ಲಿ 3 ತಿಂಗಳ ಹೆಣ್ಣು ಮಗುವಿನ ಮೃತ ದೇಹ ಪತ್ತೆಯಾಗಿದೆ. ಹಾಗಾಗಿ ಮಹಿಳೆ ಹಾಗೂ ಆಕೆತ ಪತಿ, ಗಂಡನ ಅಪ್ಪ-ಅಪ್ಪಇವರೆಲ್ಲರೂ ಒಟ್ಟಿಗೆ ಇದ್ದರು. ಹೀಗಾಗಿ ಪೊಲೀಸರಿಗೆ ಎಲ್ಲರ ಮೇಲೆ ಅನುಮಾನ ಮೂಡಿತ್ತು.
ಎಲ್ಲರನ್ನೂ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ತಾಯಿ ಸ್ವಾತಿ ಅವರ ಫೋನ್ ಚೆಕ್ ಮಾಡಿದ್ದಾರೆ. ಗೂಗಲ್ ಹಾಗೂ ಯೂಟ್ಯೂಬ್ನಲ್ಲಿ ಮಗುವನ್ನು ಕೊಲ್ಲುವುದು ಹೇಗೆ ಎಂಬುದನ್ನು ತಾಯಿ ಸ್ವಾತಿ ಸರ್ಚ್ ಮಾಡಿದ್ದಾಳೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ನಡೆದ ಘಟನೆಯನ್ನೆಲ್ಲ ತಾಯಿ ಸ್ವಾತಿ ಹೇಳಿದ್ದಾಳೆ.