ಪಾಟ್ನಾ, ಅ.25 (DaijiworldNews/PY): "ನಿಮಗೆ ಸೋಲಲು ಅಥವಾ ಠೇವಣಿ ಕಳೆದುಕೊಳ್ಳಲು ವಿಧಾನಸಭೆ ಸ್ಥಾನಗಳನ್ನು ಬಿಟ್ಟುಕೊಡಬೇಕೇ?" ಎಂದು ಆರ್ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ ಅನ್ನು ಪ್ರಶ್ನಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ನೊಂದಿಗೆ ಏನು ಮೈತ್ರಿ. ಭಕ್ತಚರಣ್ದಾಸ್ ಓರ್ವ ಅವಿವೇಕಿ" ಎಂದಿದ್ದಾರೆ.
"2020ರ ಚುನಾವಣೆಯಲ್ಲಿ ಕಾಂಗ್ರೆಸ್ನ ಕಳಪೆ ಪ್ರದರ್ಶನದ ಕಾರಣ ಮತ್ತೆ ನಿತೀಶ್ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂತು. ಕಾಂಗ್ರೆಸ್ಎ ನೀಡಿದ್ದ 70 ಸ್ಥಾನಗಳಲ್ಲಿ 19 ಕ್ಷೇತ್ರಗಳಲ್ಲಿ ಮಾತ್ರವೇ ಜಯ ಗಳಿಸಿತು" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ಶಕೀಲ್ ಅಹ್ಮದ್ ಲಾಲೂ ಪ್ರಸಾದ್ ಯಾದವ್ ಅವರ ಟೀಕೆಯನ್ನು ಖಂಡಿಸಿದ್ದು, "ಈ ರೀತಿಯಾದ ಹೇಳಿಕೆ ಲಾಲೂ ಅವರ ದಲಿತ ವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದೆ" ಎಂದು ತಿಳಿಸಿದ್ದಾರೆ.