ಹಿಮಾಚಲ ಪ್ರದೇಶ, ಅ.25 (DaijiworldNews/PY): "ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಮತ್ತೆ ಭಾರೀ ಹಿಮಪಾತ ಸಂಭವಿಸಿದ ಪರಿಣಾಮ ಮೂವರು ಚಾರಣಿಗರು ಮೃತಪಟ್ಟಿದ್ದಾರೆ" ಎಂದು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರು ಹೇಳಿದ್ದಾರೆ.

ಮೃತರನ್ನು ರಾಜೇಂದ್ರ ಪಾಠಕ್, ಅಶೋಕ್ ಭಲೇರಾವ್ ಮತ್ತು ದೀಪಕ್ ರಾವ್ ಎಂದು ಗುರುತಿಸಲಾಗಿದೆ. ಈ ಮೂವರು ಶಿಮ್ಲಾದ ರೋಹ್ರುದಲ್ಲಿರುವ ಜಂಗ್ಲಿಖ್ನಿಂದ ಸಾಂಗ್ಲಾದ ಕಿನ್ನೌರ್ಗೆ ತೆರಳುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, "ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭಾರೀ ಹಿಮಪಾತದ ಪರಿಣಾಮ ಮೂವರು ಚಾರಣಿಗರು ಮೃತಪಟ್ಟಿದ್ಧಾರೆ. ಇದರಲ್ಲಿ ಸಿಲುಕಿದ್ದ 10 ಮಂದಿಯನ್ನು ರಕ್ಷಿಸಲಾಗಿದೆ. ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಮಾಹಿತಿ ನೀಡಿದ್ದಾರೆ" ಎಂದಿದೆ.