ತೆಲಂಗಾಣ, ಅ.25 (DaijiworldNews/HR): ತೆಲಂಗಾಣ ಗಡಿಯಲ್ಲಿ ಪೊಲೀಸರು ಮತ್ತು ನಕ್ಸಲರೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ, ಮೂವರು ನಕ್ಸಲರನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ
ತೆಲಂಗಾಣದ ಮುಲುಗು ಜಿಲ್ಲೆಯ ಕಾಡಿನಲ್ಲಿ ನಕ್ಸಲ್ ಕಾರ್ಯಪಡೆ ಹಾಗೂ ನಕ್ಸಲ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.
ಇನ್ನು ಈ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರನ್ನು ಹತ್ಯೆಮಾಡಲಾಗಿದ್ದು, ಮೃತ ನಕ್ಸಲರಿಂದ ಎಸ್ ಎಲ್ ಆರ್ ಅಂಡ್ ಎಕೆ-47 ರೈಫಲ್ಸ್ ವಶ ಪಡಿಸಿಕೊಳ್ಳಲಾಗಿದೆ.
ಎನ್ಕೌಂಟರ್ಗೆ ಬಲಿಯಾದಂತವರು ಮಾವೋವಾದಿಗಳು. ಇವರೆಲ್ಲ ನಕ್ಸಲ್ ಪ್ರಮುಖ ನಾಯಕರಾಗಿದ್ದಾರೆ. ಕೆಲ ನಕ್ಸಲರನ್ನು ಬಂಧಿಸಲ್ಪಟ್ಟಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಎಎಸ್ಪಿ ಗೌಶ್ ಆಲಂ ಮಾಹಿತಿ ನೀಡಿದ್ದಾರೆ.