ನವದೆಹಲಿ, ಅ.25 (DaijiworldNews/HR): 100 ಕೋಟಿ ಕೊರೊನಾ ಲಸಿಕೆಗಳಿಗೆ ಮಾಡಿದಂತೆಯೇ ಕೇಂದ್ರವು ಇಂಧನ ಬೆಲೆ ಏರಿಕೆಗೆ ಶತಮಾನೋತ್ಸವಗಳನ್ನು ಆಚರಿಸಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "100 ಕೋಟಿ ವ್ಯಾಕ್ಸಿನೇಷನ್ ಪೂರ್ಣಗೊಂಡ ಸಂಭ್ರಮವನ್ನು ಪ್ರಧಾನಿ ಮೋದಿ ಅವರು ತಮ್ಮ ಮಂತ್ರಿಗಳೊಂದಿಗೆ ಆಚರಿಸಿದರು. ಹಾಗೆಯೇ ಇಂಧನ ಬೆಲೆ ಏರಿಕೆಯ ಶತಮಾನೋತ್ಸವಗಳನ್ನು ಆಚರಿಸುವಲ್ಲಿ ಅವರು ಉದಾಹರಣೆಯಾಗಿ ಮುನ್ನಡೆಸಬೇಕು: ಕೆಲವು ವಾರಗಳ ಹಿಂದೆ ಪೆಟ್ರೋಲ್ ಲೀಟರ್ಗೆ 100 ರೂ ದಾಟಿತ್ತು ಮತ್ತು ಈಗ ಡೀಸೆಲ್ ಲೀಟರ್ಗೆ 100 ರೂ ದಾಟಿದೆ. ಗ್ಯಾಸ್ ಸಿಲಿಂಡರ್ ಪ್ರತಿ ಸಿಲಿಂಡರ್ಗೆ 1,000 ರೂಪಾಯಿ ದಾಟಿದಾಗ ಸಂಭ್ರಮಿಸಲು ಮತ್ತೊಂದು ಅವಕಾಶ ಸಿಗಲಿದೆ" ಎಂದರು.
ಇನ್ನು ದೇಶಾದ್ಯಂತ ಸತತ ಐದನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದ್ದು, 0.35 ರೂ.ಗಳ ಏರಿಕೆಯೊಂದಿಗೆ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 107.59 ರೂ.ಗೆ ಏರಿಕೆಯಾಗಿದೆ. ಡೀಸೆಲ್ ಬೆಲೆಯು ದೆಹಲಿಯಲ್ಲಿ 0.35 ರೂ.ಗಳಷ್ಟು ಹೆಚ್ಚಳವನ್ನು ಕಂಡಿದೆ, ಆ ಮೂಲಕ ಪ್ರತಿ ಲೀಟರ್ಗೆ 96.32 ರೂ. ಆಗಿದೆ.