ವಿಜಯಪುರ,ಅ.25 (DaijiworldNews/HR): ಜಮೀರ್ ಅಹ್ಮದ್ ಅವರು ಬಿಜೆಪಿ ನಾಯಕರು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಮ್ಮ ಪಕ್ಷದ ಭಾವನೆಯನ್ನು ಹಾಗೂ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ಸಿಂದಗಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭೂಸನೂರ 20 ಸಾವಿರ ಮತಗಳ ಅಂತರದಿದ ಗೆಲುವು ಸಾಧಿಸಲಿದ್ದಾರೆ. ಕುಮಾರಸ್ವಾಮಿ ಆರ್.ಎಸ್. ಎಸ್ ಚಡ್ಡಿ ಹಾಕಿದಾರಾ ನೋಡಬೇಕು ಎಂಬ ಜಮೀರ್ ವ್ಯಂಗ್ಯವಾಡಿದ್ದು, ಕುಮಾರಸ್ವಾಮಿ ಅವರೇ ಇದಕ್ಕೆ ಉತ್ತರ ಹೇಳಬೇಕು" ಎಂದರು.
ಇನ್ನು ವಿಧಾನಸೌಧಕ್ಕೆ ಬೀಗಹಾಕಿ ಪ್ರಚಾರ ನಡೆಸುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳುತ್ತಿದ್ದು, ಕಾಂಗ್ರೆಸ್ ಸರ್ಕಾರ ಇದ್ದಾಗ ಮಾಡಿರಬೇಕು, ಆದರೆ ನಮ್ಮ ಸರ್ಕಾರದಲ್ಲಿ ಸಚಿವರು ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಬಗೆ ಹರಿಸಲು ಬಂದಿದ್ದಾರೆ ಎಂದಿದ್ದಾರೆ.