ನವದೆಹಲಿ, ಅ.25 (DaijiworldNews/PY): ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್-ಬೆಳಗಾವಿ ಮಾರ್ಗದ ಸ್ಪೈಸ್ ಜೆಟ್ ವಿಮಾನವು ಭಾನುವಾರ ನಿಗದಿತ ರನ್ವೇ ತುದಿಯ ಬದಲಿಗೆ ಇನ್ನೊಂದು ತುದಿಯಲ್ಲಿ ತಪ್ಪಾಗಿ ಲ್ಯಾಂಡಿಂಗ್ ಆಗಿದ್ದು, ಇದಕ್ಕೆ ಕಾರಣರಾದ ಪೈಲಟ್ಗಳನ್ನು ಅಮಾನತಿನಲ್ಲಿಡಲಾಗಿದೆ.

ಪ್ರಾತಿನಿಧಿಕ ಚಿತ್ರ
26ನೇ ರನ್ವೇನಲ್ಲಿ ಲ್ಯಾಂಡಿಂಗ್ ಆಗಬೇಕಿದ್ದ ವಿಮಾನ, 8ನೇ ರನ್ವೇನಲ್ಲಿ ಲ್ಯಾಂಡಿಂಗ್ ಆಗಿದೆ. 8ನೇ ರನ್ವೇನಲ್ಲಿ ಯಾವುದೇ ವಿಮಾನ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಡಿಎಎಸ್ಎಚ್8 ಕ್ಯೂ400 ಸ್ಪೈಸ್ ಜೆಟ್ ವಿಮಾನವು ಅ.24ರಂದು ಹೈದರಾಬಾದ್ನಿಂದ ಬೆಳಗಾವಿಗೆ ಹಾರಾಟ ನಡೆಸಿತು. ನಿಲ್ದಾಣದಲ್ಲಿ ಇಲಿಯುವ ಸಂದರ್ಭ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸಂಚಾರ ನಿಯಂತ್ರಕ ವಿಭಾಗ, ರನ್ವೇ 26ರಲ್ಲಿ ಇಳಿಯಲು ಸೂಚಿಸಿತು. ಆದರೆ, ಪೈಲಟ್ಗಳು ವಿಮಾನವನ್ನು 26ನೇ ರನ್ವೇಯಲ್ಲಿ ಇಳಿಸುವ ಬದಲು ರನ್ವೇ08ರಲ್ಲಿ ಇಳಿಸಿದ್ದಾರೆ. ಹಾಗಾಗಿ ವಿಮಾನವನ್ನು ನಿಯೋಜಿತ ರನ್ವೇನಲ್ಲಿ ಇಳಿಸುವ ಬದಲು ರನ್ವೇನಲ್ಲಿರುವ ಮತ್ತೊಂದು ತುದಿಯಲ್ಲಿ ಇಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.
"ಈ ಬಗ್ಗೆ ವಿಮಾನಯಾನ ಸಂಸ್ಥೆ ಕೂಡಲೇ ಕ್ರಮ ಕೈಗೊಂಡಿದ್ದು, ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯಕ್ಕೆ ಮಾಹಿತಿ ರವಾನಿಸಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆಗೂ ಮಾಹಿತಿ ನೀಡಲಾಗಿದೆ" ಎಂದು ವಕ್ತಾರರು ಹೇಳಿದ್ದಾರೆ.