ವಿಜಯಪುರ, ಅ.25 (DaijiworldNews/PY): "ಸಿಂದಗಿ ಕ್ಷೇತ್ರದ ಮತದಾರರು ಬಿಜೆಪಿ ಪಕ್ಷದ ರಮೇಶ ಭೂಸನೂರ ಎಂಬ ಎತ್ತನ್ನು ಕಟ್ಟಿ. ಕಾಂಗ್ರೆಸ್ನ ಕೋಣವನ್ನೂ ಕಟ್ಟಬೇಡಿ, ಜೆಡಿಎಸ್ ಪಕ್ಷದ ಹಸುವನ್ನೂ ಕಟ್ಟಬೇಡಿ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮನವಿ ಮಾಡಿಕೊಂಡಿದ್ದಾರೆ.

ಸೋಮವಾರ ಸಿಂದಗಿ ಉಪ ವಿಧಾನಸಭೆ ಚುನಾವಣೆ ಹಿನ್ನೆಲೆ ಸಿಂದಗಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ರೋಡ್ ಶೋ ಪ್ರಚಾರ ನಡೆಸಿದ ಅವರು, "ಕ್ಷೇತ್ರದ ಅಭಿವೃದ್ದಿಗಾಗಿ ಬಿಜೆಪಿಯನ್ನು ಗೆಲ್ಲಿಸಿ" ಎಂದು ಮನವಿ ಮಾಡಿದ್ದಾರೆ.
"ಈ ಬಾರಿ ಸಿಂದಗಿ ಮತದಾರರು ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇಬ್ಬರಿಗೂ ಕೂಡಾ ನಿಮ್ಮ ಪಕ್ಷಕ್ಕೆ ಮತ ನೀಡುವುದಿಲ್ಲ ಎಂದು ಹೇಳಿ. ಮೊಸರು, ರೊಟ್ಟಿ, ಮುದ್ದೆ ಬುತ್ತಿ ಕಟ್ಟಿ ಕೊಟುತ್ತೇವೆ, ಮನೆ ಕಡೆ ನಡೆಯಿರಿ. ನಿಮಗೆ ಇಲ್ಲಿ ಮತ ಸಿಗುವುದಿಲ್ಲ" ಎಂದಿದ್ದಾರೆ.