ಬೆಂಗಳೂರು, ಅ.25 (DaijiworldNews/HR): ಸಿಂಧಗಿ ಹಾಗೂ ಹಾನಗಲ್ನಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರದ ಉಪ ಚುನಾವಣೆಯಲ್ಲಿ ನೂರಲ್ಲ ಇನ್ನೂರು ಪರ್ಸೆಂಟ್ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ಎಲ್ಲಾ ಮಂತ್ರಿಗಳು ವಿಧಾನಸೌಧಕ್ಕೆ ಬೀಗ ಹಾಕಿ ಪ್ರಚಾರದಲ್ಲಿ ತೊಡಗಿದ್ದಾರೆ. ಒಬ್ಬರು ಕೂಡ ವಿಧಾನಸೌಧದಲ್ಲಿ ಇಲ್ಲ. ಜನರ ಹಾಗುಹೋಗುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ" ಎಂದರು.
ಇನ್ನು "ಮುಖ್ಯಮಂತ್ರಿಯಾದವರು ಒಂದೆರಡು ಬಾರಿ ಉಪಚುನಾವಣೆ ಪ್ರಚಾರದಲ್ಲಿ ತೊಡಗುತ್ತಾರೆ. ಆದರೆ ಈಗ ಸಿಂಧಗಿ, ಹಾನಗಲ್ನಲ್ಲಿ ಠಿಕಾಣಿ ಹೂಡಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಅಲ್ಲಿನ ಜನರು ಪ್ರಜ್ಞಾವಂತರಾಗಿದ್ದು, ಇವೆಲ್ಲವನ್ನೂ ಅರಿತಿದ್ದಾರೆ" ಎಂದು ತಿಳಿಸಿದ್ದಾರೆ.