ಬೆಂಗಳೂರು, ಅ.25 (DaijiworldNews/PY): ಸಿದ್ದರಾಮಯ್ಯ ನಮ್ಮ ಪಕ್ಷದಿಂದಲೇ ಬೆಳೆದು ಹೋದವರು. ಈಗ ಅಲ್ಲಿಗೆ ಹೋಗಿ ದೊಡ್ಡ ನಾಯಕರಂತೆ ಮಾತನಾಡುತ್ತಾರೆ ಎಂದು ಹೇಳಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿರುವ ಅವರು, "ನಾವೇ ಹೆಚ್ ಡಿ ದೇವೇಗೌಡರನ್ನು ಸಿಎಂ ಮಾಡಿದ್ದು" ಎಂದಿದ್ದಾರೆ.

ಉಪಚುನಾವಣಾ ಅಖಾಡದಲ್ಲಿ ರಾಜಕೀಯ ನಾಯಕರ ನಡುವೆ ಮಾತಿನ ಫೈಟ್ ಹೆಚ್ಚಾಗಿದ್ದು, ಯಾರನ್ನು ಯಾರು ಬೆಳೆಸಿದ್ದಾರೆ?. ಯಾರು ಯಾರನ್ನು ನಾಯಕರನ್ನಾಗಿ ಮಾಡಿದ್ದಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.
ಈ ವಿಚಾರವಾಗಿ ಮಾತನಾಡಿದ ದೇವೇಗೌಡರು, "ಸಿದ್ದರಾಮಯ್ಯ, ಜಮೀರ್ ಅಹ್ಮದ್ ನಮ್ಮಿಂದಲೇ ಬೆಳೆದು ಹೋದವರು" ಎಂದಿದ್ದರು.
ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, "ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದವರು ನಾವೇ" ಎಂದು ತಿಳಿಸಿದ್ದಾರೆ.