ನವದೆಹಲಿ,ಅ 26 (DaijiworldNews/MS): ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ ಆರೋಪದಲ್ಲಿ ಗುಜರಾತ್ ಭಯೋತ್ಪಾದಕ ವಿರೋಧಿ ತಂಡ(ಎಟಿಎಸ್)ಗುಜರಾತ್ ನ ಕಚ್ ಜಿಲ್ಲೆಯ ಗಾಂಧಿಧಾಮ್ ನಿಂದ ಗಡಿ ಭದ್ರತಾ ಪಡೆಯ(ಬಿಎಸ್ ಎಫ್)ಸಿಬ್ಬಂದಿಯನ್ನು ಸೋಮವಾರ ಬಂಧಿಸಿದೆ.

ಸಾಂದರ್ಭಿಕ ಚಿತ್ರ
ಬಂಧಿತ ಬಿಎಸ್ಎಫ್ ಕಾನ್ ಸ್ಟೇಬಲ್ ನ್ನು ಮೊಹಮ್ಮದ್ ಸಜ್ಜದ್ ಎಂದು ಗುರುತಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ರಜೌರಿ ಜಿಲ್ಲೆಯ ಸರೋಲಾ ಗ್ರಾಮದವನಾಗಿದ್ದಾನೆ. , ಸಜ್ಜಾದ್ 2012ರಲ್ಲಿ ಬಿಎಸ್ಎಫ್ಗೆ ಕಾನ್ಸ್ಟೇಬಲ್ ಆಗಿ ಸೇರಿದ್ದು ಜುಲೈ 2021 ರಲ್ಲಿ ಭುಜ್ನಲ್ಲಿರುವ 74 ಬಿಎಸ್ಎಫ್ ಬೆಟಾಲಿಯನ್ಗೆ ಈತನನ್ನು ನಿಯೋಜಿಸಲಾಗಿತ್ತು
ವಾಟ್ಸಾಪ್ ಮೂಲಕ ನೆರೆಯ ದೇಶಕ್ಕೆ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ. ಸಜ್ಜಾದ್ ನೀಡಿದ ಮಾಹಿತಿಗಾಗಿ ಈತನ ಸಹೋದರ ವಾಜಿದ್ ಮತ್ತು ಸಹೋದ್ಯೋಗಿ ಇಕ್ಬಾಲ್ ರಶೀದ್ ಖಾತೆಗೆ ಹಣ ಜಮಾ ಆಗುತ್ತಿತ್ತು ಎಂದು ಎಟಿಎಸ್ ತಿಳಿಸಿದೆ.
ಸಜ್ಜಾದ್ ಬಿಎಸ್ ಎಫ್ ಗೆ ಸೇರುವ ಮೊದಲು ಪಾಕಿಸ್ತಾನಕ್ಕೆ ತೆರಳಿ 46 ದಿನಗಳ ಕಾಲ ಅಲ್ಲಿ ನೆಲೆಸಿದ್ದ. ಜಮ್ಮುವಿನ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯಿಂದ ಪಡೆದಿದ್ದು ಪಾಕಿಸ್ತಾನಕ್ಕೆ ಭೇಟಿ ನೀಡಲು ಅಟ್ಟಾರಿ ರೈಲು ನಿಲ್ದಾಣದಿಂದ ಸಂಝೌತಾ ಎಕ್ಸ್ಪ್ರೆಸ್ಗೆ ಹತ್ತಿದ್ದ ಎಂದು ವಿವರಿಸಿದೆ