ನವದೆಹಲಿ, ಅ.26 (DaijiworldNews/HR): ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಹೋರಾಡಲು ಪಕ್ಷದಲ್ಲಿ 'ಶಿಸ್ತು ಮತ್ತು ಐಕ್ಯತೆ ಪ್ರಮುಖ ಅಗತ್ಯ' ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.

ಪಕ್ಷದ ನಾಯಕರನ್ನುದ್ದೇಶಿಸಿ ಮಾತನಾಡಿದ ಅವರು, "ನಾವು ಬಿಜೆಪಿ ಮತ್ತು ಆರ್ಎಸ್ಎಸ್ನ ಪೈಶಾಚಿಕ ಅಭಿಯಾನದ ವಿರುದ್ಧ ಸೈದ್ಧಾಂತಿಕವಾಗಿ ಹೋರಾಡಬೇಕು. ನಾವು ಈ ಯುದ್ಧವನ್ನು ಗೆಲ್ಲಬೇಕಾದರೆ ದೃಢನಿಶ್ಚಯದಿಂದ ಹಾಗೆ ಮಾಡಬೇಕು ಮತ್ತು ಜನರ ಮುಂದೆ ಅವರ ಸುಳ್ಳುಗಳನ್ನು ಬಹಿರಂಗಪಡಿಸಬೇಕು" ಎಂದಿದ್ದಾರೆ
ಇನ್ನು "ಶಿಸ್ತು ಮತ್ತು ಐಕ್ಯತೆಯ ಪ್ರಮುಖ ಅಗತ್ಯವನ್ನು ನಾನು ಮತ್ತೆ ಒತ್ತಿ ಹೇಳಲು ಬಯಸುತ್ತೇನೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಮುಖ್ಯವಾದುದು ಸಂಸ್ಥೆಯನ್ನು ಬಲಪಡಿಸುವುದು. ಇದು ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಮೀರಬೇಕು" ಎಂದು ಹೇಳಿದ್ದಾರೆ.