ವಿಜಯಪುರ, ಅ.26 (DaijiworldNews/HR): ಜಮೀರ್ ಅದೊಂದು ಕೊಚ್ಚೆ, ಹಾಗಾಗಿ ಕೊಚ್ಚೆ ಮೇಲೆ ಕಲ್ಲು ಎಸೆಯುವ ಕೆಲಸ ಮಾಡಲಾರೆ ಅದರ ಮೇಲೆ ಕಲ್ಲು ಹಾಕಿದರೆ ಅದು ನಮ್ಮ ಮೇಲೆ ಬೀಳುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ಜಮೀರ್ ಈಗ ಅಲ್ಪಸಂಖ್ಯಾತರ ಎದುರು ಹೋಗಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಿ ಅಂತ ನನಗೆ ತೊಂದರೆ ಕೊಟ್ಟಿದ್ದನ್ನು ಹೋಗಿ ಈಗ ಹೇಳಲಿ. ನಾನು ಬಿಬಿಎಂಪಿ ಕಸ ಎತ್ತುವ ಟೆಂಡರ್ ಪಡೆದಿದ್ದು ನಿಜ. ಆಗ ದೇವೇಗೌಡರು ನನ್ನನ್ನು ಕರೆದು ನಾನು ಅಧಿಕಾರದಲ್ಲಿ ಇರುವಾಗ ಇಂಥದ್ದೆಲ್ಲ ಬೇಡ ಎಂದು ಸಲಹೆ ನೀಡಿದಾಗ ಕಸ ವಿಲೇವಾರಿ ಟೆಂಡರ್ ಕೈಬಿಟ್ಟೆ" ಎಂದರು.
ಇನ್ನುಕುಮಾರಸ್ವಾಮಿ ಕರ್ಚೀಫ್ ಗೆ ಗ್ಲಿಸರೀನ್ ಹಾಕಿಕೊಂಡು ಅಳುತ್ತಾರೆ ಎಂದು ಈ ಹಿಂದೆಯೇ ಅವರು ಟೀಕಿಸಿದ್ದಾರೆ. ನಮ್ಮ ಕುಟುಂಬದವರು ಭಾವನಾತ್ಮಕ ಜೀವಿಗಳು. ಭಾವನೆಗಳಿಂದಾಗಿ ಕಣ್ಣೀರು ಬರುತ್ತೆ ಎಂದಿದ್ದಾರೆ.