ನವದೆಹಲಿ, ಅ.27 (DaijiworldNews/PY): "ಕೊರೊನಾ ಲಸಿಕೆ ನೀಡುವುದರ ಮೂಲಕ ಜೀವಗಳನ್ನು ಉಳಿಸಬಹುದು. ಬದಲಾಗಿ ವಾಕ್ಚಾತುರ್ಯದ ಕಥೆಗಳಿಂದ ಅಲ್ಲ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರೊನಾ ಲಸಿಕೆ ನೀಡುವ ಮೂಲಕ ಜೀವ ಉಳಿಸಬಹುದೇ ಹೊರತು ವಾಕ್ಚಾತುರ್ಯದ ಕಥೆಗಳಿಂದ ಅಲ್ಲ. ದೇಶದಲ್ಲಿ ಕೊರೊನಾ ಲಸಿಕೆ ಪಡೆಯಬೇಕಾದ ಜನರ ಸಂಖ್ಯೆ ಹೆಚ್ಚಿದೆ" ಎಂದಿದ್ದಾರೆ.
ದೇಶದಲ್ಲಿ ಲಸಿಕಾ ಅಭಿಯಾನ 100 ಕೋಟಿ ಡೋಸ್ ಮೈಲಿಗಲ್ಲು ದಾಟಲು ಭಾರತೀಯ ವಿಜ್ಞಾನಿಗಳು ಹಾಗೂ ಸಂಶೋಧಕರ ಶ್ರಮವನ್ನು ಶ್ಲಾಘಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬರೆದಿರುವ ಪತ್ರವನ್ನು ಟ್ವೀಟ್ನಲ್ಲಿ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.
"ಕೊರೊನಾದ ವಿರುದ್ದ ಮಕ್ಕಳು ಸೇರಿದಂತೆ ಅಧಿಕ ಮಂದಿಗೆ ಲಸಿಕೆ ದೊರೆಯಬೇಕಿದೆ" ಎಂದಿದ್ದಾರೆ.
ಕಾಂಗ್ರೆಸ್, ಸೋನಿಯಾ ಗಾಂಧಿ ಅವರ ಲೇಖನವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, "ಕೊರೊನಾ ಲಸಿಕೆ ಉಚಿತ ಎಂದು ಪ್ರಧಾನಿ ಅವರು ಹೇಳುತ್ತಾರೆ. ಆದರೆ, ಕೊರೊನಾ ಲಸಿಕೆ ಯಾವಾಗಲೂ ಉಚಿತವಾಗಿರುತ್ತದೆ ಎಂದು ಹೇಳವುದನ್ನು ಅವರು ಮರೆತುಬಿಡುತ್ತಾರೆ. ಭಾರತದ ಸಾರ್ವತ್ರಿಕ ಉಚಿತ ಲಸಿಕಾ ನೀತಿಯಿಂದ ಬಿಜೆಪಿ ಸರ್ಕಾರ ದೂರ ಸರಿದಂತೆ ಕಾಣುತ್ತದೆ" ಎಂದಿದೆ.