ಬೆಂಗಳೂರು, ಅ.31 (DaijiworldNews/HR): 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ 66 ಸಾಧಕರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಭಾನುವಾರ ಬಿಡುಗಡೆ ಮಾಡಿದ್ದಾರೆ.

66ನೇ ಕನ್ನಡ ರಾಜ್ಯೋತ್ಸವದಂದು ನಟ ದೇವರಾಜ್, ಕ್ರೀಡಾಪಟು ರೋಹನ್ ಬೋಪಣ್ಣ ಸೇರಿದಂತೆ 66 ಸಾಧಕರಿಗೆ ಈ ಬಾರಿ ಪ್ರಶಸ್ತಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ಇನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಸರ್ಕಾರ ಜನರಿಗೆ ಆಹ್ವಾನ ನೀಡಿದ್ದು, ಈ ಬಾರಿ 28 ಸಾವಿರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಅದರಲ್ಲಿ 66 ಸಾಧಕರನ್ನು ಸರ್ಕಾರ ಆಯ್ಕೆ ಮಾಡಲಾಗಿದೆ.
ಸಾಧಕರ ಪಟ್ಟಿ:





