ಮುಂಬೈ, ನ. 02 (DaijiworldNews/HR): ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಅವರು ಪರಾರಿಯಾಗಿಲ್ಲ, ಕೇಂದ್ರದ ಸಹಾಯವಿಲ್ಲದೆ ಅವರು ದೇಶವನ್ನು ತೊರೆಯಲು ಸಾಧ್ಯವಿಲ್ಲ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮ್ ಬೀರ್ ಸಿಂಗ್ ಅವರ ಆರೋಪಗಳ ಆಧಾರದ ಮೇಲೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಕೇಂದ್ರದ ತನಿಖಾ ತಂಡ ಬಂಧಿಸಿದ್ದು, ಇದು ಅತ್ಯಂತ ದುರದೃಷ್ಟಕರ ಮತ್ತು ಅನೈತಿಕ ಎಂದರು.
ಇನ್ನುಮಹಾರಾಷ್ಟ್ರ ಪೊಲೀಸರು ದಾಖಲಿಸಿರುವ ಕೆಲವು ಸುಲಿಗೆ ಪ್ರಕರಣಗಳು ಸೇರಿದಂತೆ ಹಲವು ವಿಚಾರಗಳಲ್ಲಿ ಪರಮ್ ಬೀರ್ ಸಿಂಗ್ ತನಿಖೆ ಎದುರಿಸುತ್ತಿದ್ದು,ಇತ್ತೀಚೆಗೆ, ಮುಂಬೈ ಮತ್ತು ನೆರೆಯ ಥಾಣೆಯಲ್ಲಿ ವಿವಿಧ ಸುಲಿಗೆ ಪ್ರಕರಣಗಳಲ್ಲಿ ಅವರ ವಿರುದ್ಧ ಎರಡು ಜಾಮೀನು ರಹಿತ ವಾರಂಟ್ಗಳನ್ನು ಹೊರಡಿಸಲಾಗಿದೆ.