ಮೈಸೂರು, ನ.11 (DaijiworldNews/HR): ಬಿಟ್ ಕಾಯಿನ್ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ಮುಂಖಡರ ಇಬ್ಬರು ಮಕ್ಕಳ ಹೆಸರಿದೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ರಾಜ್ಯ ಇತಿಹಾಸದಲ್ಲೇ 13 ಬಾರಿ ಬಜೆಟ್ ಮಂಡಿಸಿರುವಂತ ಕೀರ್ತಿ ಹೊಂದಿರೋರು ಸಿದ್ಧರಾಮಯ್ಯ ಆಗಿದ್ದು, ಬಿಟ್ ಕಾಯಿನ್ ಅಂದ್ರೇನು ಅಂತ ಅರ್ಥಶಾಸ್ತ್ರಜ್ಞ ಸಿದ್ಧರಾಮಯ್ಯನವರೇ ಉತ್ತರಿಸಲಿ. ಈ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ಮುಂಖಡರ ಇಬ್ಬರು ಮಕ್ಕಳ ಹೆಸರಿದೆ" ಎಂದರು.
ಇನ್ನು ಬಿಟ್ ಕಾಯಿನ್ ಕೇಸ್ ಚಾರ್ಜ್ ಶೀಟ್ ನಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ಉಲ್ಲೇಖವಿದ್ದು, ಆ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿದ್ರೇ ಅವರ ಹಿಂದಿರುವ ಎಲ್ಲರ ಹೆಸರು ಹೊರಗೆ ಬರಲಿದೆ. ಆಗ ಕಾಂಗ್ರೆಸ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.