ಕಲಬುರ್ಗಿ, ನ.20 (DaijiworldNews/PY): "ಕಾಂಗ್ರೆಸ್ ಮುಖಂಡರ ಮಕ್ಕಳಿಗೆ ಹ್ಯಾಕರ್ ಶ್ರೀಕಿ ಡ್ರಗ್ಸ್ ತರಿಸಿಕೊಡುತ್ತಿದ್ದ" ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಕಾಂಗ್ರೆಸ್ ಮುಖಂಡರೊಂದಿಗೆ ಗೋವಾದಲ್ಲಿ ಕಾಣಿಸಿಕೊಂಡಿದ್ದ" ಎಂದಿದ್ದಾರೆ
"ಶ್ರೀಕಿಯನ್ನು ಹಿಡಿದು ತನಿಕೆ ನಡೆಸುತ್ತಿರುವುದು ತಪ್ಪು ಎನ್ನುವ ಹಾಗೆ ಕಾಂಗ್ರೆಸ್ ಮುಖಂಡರು ಮಾತನಾಡುತ್ತಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಹೇಳಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಪ್ರಿಯಾಂಕ್ ಖರ್ಗೆ ಪಾಂಡಿತ್ಯ ಪ್ರದರ್ಶನ ಮಾಡುತ್ತಿದ್ದಾರೆ. ನೀವು ಐಟಿ ಸಚಿವರಾಗಿದ್ದಾಗ ಏಕೆ ಹಿಡಿಯಲಿಲ್ಲ. ಆತ ಹ್ಯಾಕರ್ ಎಂದು ನಿಮಗೆ ತಿಳಿಯಲಿಲ್ಲವೇ?. ಈ ಕುರಿತು ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ, ಗೃಹ ಸಚಿವರು, ಐಟಿ, ಬಿಟಿ ಸಚಿವರಿಗೆ ಮಾಹಿತಿ ಇದ್ದರೂ ಸಹ ಏಕೆ ಆತನನ್ನು ಹಿಡಿಯಲಿಲ್ಲ?" ಎಂದು ಕೇಳಿದ್ದಾರೆ