ಬೆಳಗಾವಿ, ಡಿ.15 (DaijiworldNews/HR): ಮತಾಂತರ ನಿಷೇಧ ಕಾಯ್ದೆ ಜಾರಿಯಿಂದ ಅಲ್ಪಸಂಖ್ಯಾತರ ರಕ್ಷಣೆಯಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ಅವರ ಧರ್ಮವನ್ನು ಅವರು ಸ್ವತಂತ್ರವಾಗಿ ರಕ್ಷಣೆ ಮಾಡಬಹುದು. ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಆದರೆ ಬಲವಂತವಾಗಿ ಮತಾಂತರ ಮಾದಬಾರದು, ಹೀಗಾಗಿ ಕಾಯ್ದೆ ತರುತ್ತಿರುವುದು" ಎಂದರು.
ಇನ್ನು ಈ ಬಗ್ಗೆ ಪ್ರಬುದ್ದರು ಚರ್ಚೆ ನಡೆಸಲಿ. ಯಾರು ವಿದ್ವಾಂಸರಿದ್ದಾರೆ ಅವರು ಚರ್ಚೆ ಮಾಡಲಿ. ಹಿಂದೂ ಸನಾತನ ಧರ್ಮದ ಬಗ್ಗೆ ಚರ್ಚೆಯಾಗಲಿ. ಆದರೆ ಹಣದ ಮೂಲಕ ಬಿಸಿನೆಸ್ ಮಾಡುವುದು ಸರಿಯಲ್ಲ" ಎಂದಿದ್ದಾರೆ.
ಬಹುಮತ ಸಾಬೀತಿಗೆ ಲಖನ್ ಹಾಗೂ ಜೆಡಿಎಸ್ ಗೆ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕಾರಣ ನಿಂತ ನೀರಲ್ಲ, ಆಯಾ ಕಾಲಘಟ್ಟಕ್ಕೆ ಏನಾಗಬೇಕೋ ಅದು ಮಾಡಬೇಕಾಗುತ್ತದೆ. ರಾಜಕೀಯದಲ್ಲಿ ಮರೆಯುವ ಗುಣವೂ ಇರಬೇಕು. ಜನಮತ ಸಂಪಾದನೆ ಬರಬೇಕು" ಎಂದು ಹೇಳಿದ್ದಾರೆ.