ನವದೆಹಲಿ, ಜ 25 (DaijiworldNews/HR): ಭಾರತದಲ್ಲಿ ಕೊಂಚ ಮಟ್ಟಿಗೆ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯತ್ತ ಸಾಗಿದ್ದು, ಕಳೆದ 24 ಗಂಟೆಗಳಲ್ಲಿ 2,55,874 ಮಂದಿಗೆ ಸೋಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 2,55,874 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದು, 614 ಮಂದಿ ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ.
ಇನ್ನು ಕಳೆದ 24 ಗಂಟೆಗಳಲ್ಲಿ 2,55,874 ಹೊಸ ಪ್ರಕರಣಗಳು ದಾಖಲಾಗಿದ್ದು, ನಿನ್ನೆಗಿಂತ ಇದು 50,190 ಕಡಿಮೆ ದಾಖಲಾಗಿದೆ.
ದೇಶದಲ್ಲಿ 2,67,753 ಚೇತರಿಕೆ ಆಗಿದ್ದು, ಒಟ್ಟು 22,36,842 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ದೈನಂದಿನ ಧನಾತ್ಮಕ ದರ: 15.52%ರಷ್ಟು ಇದೆ.