ನವದೆಹಲಿ, ಮೇ 31 (DaijiworldNews/DB): ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಬಾಲಕಿಯೋರ್ವಳು ರಚಿಸಿದ್ದ ತಮ್ಮ ತಾಯಿಯ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿಯವರು ಕಾರು ನಿಲ್ಲಿಸಿ ಸ್ವೀಕರಿಸಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಎಂಟು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶಿಮ್ಲಾದಲ್ಲಿ ಆಯೋಜಿಸಿದ್ದ ಗರೀಬ್ ಕಲ್ಯಾಣ್ ಸಮ್ಮೇಳನ್ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಧಾನಿ ಅವರು ರಾಜಧಾನಿಯ ಮಾಲ್ ರಸ್ತೆಗೆ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರೊಂದಿಗೆ ಮಂಗಳವಾರ ಆಗಮಿಸುತ್ತಿದ್ದರು. ಈ ವೇಳೆ ಬಾಲಕಿ ಮೋದಿಯವರತ್ತ ತಾನು ರಚಿಸಿದ ಮೋದಿಯವರ ತಾಯಿಯ ಪೈಂಟಿಂಗ್ನ್ನು ತೋರಿಸಿದ್ದಾಳೆ.
ಬಾಲಕಿ ರಚಿಸಿದ ಪೈಂಟಿಂಗ್ ಕಂಡು ಕೂಡಲೇ ಮೋದಿ ಕಾರು ನಿಲ್ಲಿಸಿ ಬಾಲಕಿ ಬಳಿ ತೆರಳಿ ತಮ್ಮ ತಾಯಿಯ ಚಿತ್ರವನ್ನು ಸ್ವೀಕರಿಸಿದ್ದಾರೆ. ಬಳಿಕ ಬಾಲಕಿಯೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ಜನರೊಂದಿಗೂ ಮೋದಿ ಮಾತುಕತೆ ನಡೆಸಿದ್ದು, ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿಕ್ರಿಯೆ ಪಡೆದಿದ್ದಾರೆ.