ತಿರುವನಂತಪುರಂ, ಮೇ 31 (DaijiworldNews/HR): ಮಲಯಾಳಂ ನಟ-ನಿರ್ಮಾಪಕ ವಿಜಯ್ ಬಾಬು ವಿರುದ್ಧ ನಟಿಯೊಬ್ಬರ ದೂರಿನ ಆಧಾರದ ಮೇಲೆ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ ಎಂದು ತಿಳಿದು ಬಂದಿದೆ.
ಜಸ್ಟಿಸ್ ಬೆಚು ಕುರಿಯನ್ ಥಾಮಸ್ ಅವರು ತಮ್ಮ ವಿರುದ್ಧ ಪ್ರಕರಣ ದಾಖಲಾದಾಗಿನಿಂದ ದುಬೈನಲ್ಲಿರುವ ಬಾಬು ಅವರು ಭಾರತಕ್ಕೆ ಮರಳಿ ಬಂದು ಶರಣಾಗಲು ಸಿದ್ಧರಿದ್ದರು. ಆದರೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣದ ಬಂಧನವನ್ನು ಅವರು ತಡೆದರು. ಆದ್ದರಿಂದ, ತನಿಖೆ, ಮತ್ತು ಅರ್ಜಿದಾರರ ಹಕ್ಕುಗಳ ಹಿತದೃಷ್ಟಿಯಿಂದ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ.
ಇನ್ನು ಜೂನ್ 2ರ ಶುಕ್ರವಾರದಂದು ಮುಂದಿನ ವಿಚಾರಣೆ ನಡೆಯುವವರೆಗೆ ತನಿಖೆಗೆ ಸಹಕರಿಸುವಂತೆ ಬಾಬು ಅವರಿಗೆ ಸೂಚಿಸಲಾಗಿದ್ದು, ಇಂದಿನ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಥಾಮಸ್ ಅವರು ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಗೋಪಿನಾಥ್ ಪಿ ಅವರು ಭಾರತಕ್ಕೆ ಹಿಂತಿರುಗಲು ಅವರಿಗೆ ಮಧ್ಯಂತರ ರಕ್ಷಣೆ ನೀಡುವುದು ಉತ್ತಮ ಎಂದು ತೆಗೆದುಕೊಂಡ ಅಭಿಪ್ರಾಯಕ್ಕೆ ಸಮ್ಮತಿ ನೀಡಿದ್ದಾರೆ.