ಕೊಲ್ಹಾಪುರ, ಜೂ 20 (DaijiworldNews/MS): ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಹೈಸಾಲ್ ಪಟ್ಟಣದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಎರಡು ಮನೆಗಳಲ್ಲಿ ಒಂಬತ್ತು ವ್ಯಕ್ತಿಗಳ ಶವಗಳು ಪತ್ತೆಯಾಗಿವೆ.
ಮೃತರಲ್ಲಿ ಮಾಣಿಕ್ ಮತ್ತು ಪೋಪಟ್ ಯಲ್ಲಪಾ ವಾನ್ಮೋರ್ ಇಬ್ಬರು ಸಹೋದರಾಗಿದ್ದಾರೆ. ಮಾಣಿಕ್ ಮನೆಯಲ್ಲಿ ಆತನ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಮಾಣಿಕ್ ಹಿರಿಯ ಸಹೋದರರಾಗಿದ್ದು ಪಶುವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಪೋಪಟ್ ಅವರ ಮನೆಯಲ್ಲಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ.
ಮೃತರನ್ನು ಡಾ. ಮಾಣಿಕ್ ಯೆಲಪ್ಪ ವಾನ್ಮೋರೆ, ಅಕ್ತಾಯ್ವಾನ್ಮೋರ್ (ತಾಯಿ), ರೇಖಾ ಮಾಣಿಕ್ ವಾನೋರ್ (ಪತ್ನಿ), ಪ್ರತಿಮಾ ವಾನ್ಮೋರ್ (ಮಗಳು), ಆದಿತ್ಯ ವಾನ್ಮೋರ್ (ಮಗ) ಮತ್ತು ಪೋಪಟ್ ಯೆಲಪ್ಪ ವಾನ್ಮೋರ್ (ಶಿಕ್ಷಕ), ಅರ್ಚನಾ ವಾನ್ಮೋರ್ (ಪತ್ನಿ), ಸಂಗೀತಾ ವಾನ್ಮೋರ್ (ಮಗಳು), ಶುಭಂ ವಾನ್ಮೋರ್ (ಮಗ) ಎಂದು ಗುರುತಿಸಲಾಗಿದೆ.
ಕ್ರಿಮಿನಾಶಕ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಸಾವಿಗೆ ನಿಜವಾದ ಕಾರಣ ತನಿಖೆಯ ನಂತರವಷ್ಟೇ ತಿಳಿಯಲಿದೆ. ಈ ಘಟನೆ ಇಡೀ ಸಾಂಗ್ಲಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.