ನವದೆಹಲಿ,ಜ 31(MSP): ಪ್ರಧಾನಿ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದ ಕೊನೆಯ ಬಜೆಟ್ ಅಧಿವೇಶನ ಪ್ರಾರಂಭಗೊಂಡಿದ್ದು, ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಮನಾಥ್ ಕೋವಿಂದ್ ಅವರು ಭಾಷಣ ಆರಂಭಿಸಿದ್ದಾರೆ.
ಈ ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್'ಡಿಎ ಸರ್ಕಾರ 'ನವ ಭಾರತ' ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದು ದುಡಿಯುತ್ತಿದ್ದು, ಜನರಿಗೆ ಭರವಸೆ ನೀಡಿದೆ. ಮೋದಿ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಿಂದಲೂ ನಿರಂತರವಾಗಿ ಎಲ್ಲರಿಗೂ ವಸತಿ ಒದಗಿಸುವ ಸಲುವಾಗಿ ಅಭಿಯಾನವನ್ನು ನಡೆಸುತ್ತಿದೆ.
ಇದಲ್ಲದೆ ಈಗ ಆಡಳಿತ ನಡೆಸುತ್ತಿರುವ ಎನ್ಡಿಎ ಸರಕಾರ 1 ಕೋಟಿ 30 ಲಕ್ಷ ಮನೆಗಳನ್ನು ನಿರ್ಮಿಸಿದೆ. ಇದಕ್ಕೂ ಮೊದಲಿನ ಸರ್ಕಾರ ೫ ವರ್ಷದಲ್ಲಿ ಕೇವಲ 25 ಲಕ್ಷ ಮನೆಗಳನ್ನು ಮಾತ್ರವೇ ನಿರ್ಮಿಸಿತ್ತು. ಇದಲ್ಲದೇ ವಿಶೇಷ ಯೋಜನೆ ಮೂಲಕ ಎರಡು ಕೋಟಿ 47 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿ ಬಡವರ ಮನೆಗೆ ಬೆಳಕು ಹರಿಸಲಾಗಿದೆ. ಈ ಮೂಲಕ ನವ ಭಾರತ ನಿರ್ಮಾಣಕ್ಕಾಗಿ ಎನ್'ಡಿಎ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದು ಕೋವಿಂದ್ ಹೇಳಿದರು.