ನವದೆಹಲಿ,ಫೆ 01 (MSP): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊನೆಯ ಬಜೆಟ್ನಲ್ಲಿ ನಿರೀಕ್ಷೆಯಂತೆ ರೈತರಿಗೆ ವಿಶೇಷ ಯೋಜನೆಗಳನ್ನು ಪ್ರಕಟಿಸಿದೆ.ಎಲ್ಲಕ್ಕಿಂತಲೂ ಮುಖ್ಯವಾಗಿ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಸ್ಥಾಪನೆಗೆ ಕೇಂದ್ರ ಸಮ್ಮತಿಸಿದೆ. ಹೀಗಾಗಿ ರೈತರ ಖಾತೆಗೆ ವಾರ್ಷಿಕವಾಗಿ ನೇರವಾಗಿ 6,000 ಬರಲಿದ್ದು ಇದನ್ನು 3 ಕಂತುಗಳಲ್ಲಿ 2 ಸಾವಿರ ರೂಪಾಯಿಯಂತೆ ಕೇಂದ್ರ ಜಮೆ ಮಾಡಲಿದೆ. ಇನ್ನು ರೈತರ ಖಾತೆಗೆ ಜಮೆಯಾಗುವ ಹಣವನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಅಡಿಯಲ್ಲಿ 2 ಹೆಕ್ಟೇರ್ಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಈ ಸೌಲಭ್ಯ ದೊರೆಯಲಿದೆ.
ಈ ಯೋಜನೆಯಿಂದ ಸುಮಾರು 12 ಕೋಟಿ ಸಣ್ಣ ರೈತರಿಗೆ ಅನುಕೂಲವಾಗಲಿದೆ. ಕಿಸಾನ್ ಸಮ್ಮಾನ್ ಯೋಜನೆಗಾಗಿ 75,000 ಕೋಟಿ ವೆಚ್ಚವಾಗಲಿದೆ ಎಂದು ಕೇಂದ್ರ ಲೆಕ್ಕಚಾರ ಹಾಕಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ 1.5ಪಟ್ಟು ಹೆಚ್ಚಳ ಮಾಡಲು ಬಜೆಟ್ನಲ್ಲಿ ಕ್ರಮ ಕೈಗೊಳ್ಳಲಾಗಿದೆ.