ನವದೆಹಲಿ, ಫೆ02(SS): 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿಯಾಗಬೇಕೆಂದು ನರೇಂದ್ರ ಮೋದಿ ಕನಸು ಕಾಣುತ್ತಿರುವಾಗಲೇ ಈ ಮೂವರು ಮಹಿಳೆಯರು ಪ್ರಧಾನಿ ಆಸೆಗೆ ಅಡ್ಡಗಾಲಗಿದ್ದಾರೆ.
ಒಂದೆಡೆ, ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಲು ಅಖಾಡಕ್ಕಿಳಿದಿದ್ದು, ಉತ್ತರ ಪ್ರದೇಶದ ಪೂರ್ವ ವಿಭಾಗದ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇನ್ನೊಂದೆಡೆ, ಪ್ರಿಯಾಂಕಾ ಗಾಂಧಿಗಿಂತ ಹೆಚ್ಟಿನ ರಾಜಕೀಯ ಅನುಭವ, ವರ್ಚಸ್ಸು ಹೊಂದಿರುವ ಮತ್ತೊಬ್ಬ ಪ್ರಭಾವಿ ನಾಯಕಿ ಮಮತಾ ಬ್ಯಾನರ್ಜಿಯ ಹೆಸರು ಕೂಡ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. 2 ಬಾರಿ ರೈಲ್ವೆ ಸಚಿವೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಆಗಿರುವ ಮಮತಾ ಪ್ರಬುದ್ಧ ರಾಜಕಾರಣಿ ಜೊತೆಗ ಪ್ರಧಾನಿ ಹುದ್ದೆ ಆಕಾಂಕ್ಷಿಯೂ ಆಗಿದ್ದಾರೆ.
ಮತ್ತೊಂದೆಡೆ, ದಲಿತ ನಾಯಕಿ ಬಿ.ಎಸ್.ಪಿ ಯ ಮಾಯಾವತಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಜಾಣೆ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಮಾಯಾವತಿ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.
ಹೀಗಾಗಿ ಈ ಮೂವರು ಪ್ರಬಲ ಮಹಿಳಾ ನಾಯಕಿಯರಿಂದ ಹೆಚ್ಚಿನ ಮಹಿಳಾ ಮತದಾರರನ್ನು ಸೆಳೆಯಲು ಸಾಧ್ಯವಾಗಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.