ಪುಣೆ, ಫೆ 4(MSP): ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯಕ್ಕೆ ’ಗುಡ್ ಬೈ ’ ಹೇಳಿದ್ರೆ ನಾನು ಅದೇ ದಿನ ರಾಜಕೀಯದಿಂದ ನಿವೃತ್ತರಾಗುವೆ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ. ಆದರೆ ಅವರು ಇನ್ನು ಬಹುವರ್ಷಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿರುವ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಪುಣೆಯಲ್ಲಿ ನಡೆದ ವರ್ಡ್ಸ್ ಕೌಂಟ್ ಉತ್ಸವದಲ್ಲಿ ನಡೆದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವಿಚಾರ ತಿಳಿಸಿದರು. ದೇಶದ ಪ್ರಧಾನ ಸೇವಕ ಎಂದೆಣಿಸಿಕೊಂಡಿರುವ ನರೇಂದ್ರ ಮೋದಿ ಅವರು, ಯಾವ ದಿನ ರಾಜಕೀಯದಿಂದ ನಿವೃತ್ತಿ ಪಡೆಯುವ ನಿರ್ಧಾರ ಕೈಗೊಳ್ಳುತ್ತಾರೋ ಅದೇ ದಿನ ನಾನು ಕೂಡಾ ರಾಜಕೀಯ ಜೀವನಕ್ಕೆ ತೆರೆ ಎಳೆಯುತ್ತೇನೆ' ಎಂದು ಸಚಿವೆ ಹೇಳಿದರು.
ಇದೇ ವೇಳೆ ಚರ್ಚೆಯಲ್ಲಿ ಪಾಲ್ಗೊಂಡ ಸಭಿಕರೊಬ್ಬರು, ನೀವು ದೇಶದ ಪ್ರಧಾನ ಸೇವಕ ಆಗುವುದನ್ನು ಎಂದು ನೋಡಲು ಲಭಿಸುತ್ತದೆ ಎಂಬ ಪ್ರಶ್ನೆಗೆ, ನೇರವಾಗಿ ಉತ್ತರಿಸಿದ ಇರಾನಿ "ಖಂಡಿತಾ ಲಭಿಸುವುದಿಲ್ಲ ಮತ್ತು ಅದು ಎಂದೂ ಇಲ್ಲ, ಯಾಕೆಂದರೆ ನಾನು ರಾಜಕೀಯಕ್ಕೆ ಬಂದಿರುವುದು ಪ್ರಧಾನ ಸೇವಕನಾಗಲು ಅಲ್ಲ, ಒಬ್ಬ ವರ್ಚಸ್ವಿ ನಾಯಕನೊಂದಿಗೆ ಕೆಲಸ ಮಾಡಬೇಕು ಎಂದು ನಾನು ರಾಜಕೀಯಕ್ಕೆ ಬಂದೆ. ಒಬ್ಬ ಪ್ರಭಾವಿ ಮತ್ತು ಜನಾಕರ್ಷಕ ನಾಯಕನ ಕೈಕೆಳಗೆ ಮಾಡುವ ಇಚ್ಚೆ ನನ್ನದಾಗಿತ್ತು. ಹೀಗಾಗಿಯೇ ನಾನು ಮಾಜಿ ಪ್ರಧಾನಿ ದಿವಂಗತ ವಾಜಪೇಯಿ ನಾಯಕತ್ವದಡಿ ಕೆಲಸ ಮಾಡುವ ಅದೃಷ್ಟ ಪಡೆದಿದ್ದೇನೆ. ಹಾಗೆಯೇ ಈಗ ಮೋದಿ ಅವರ ನಾಯಕತ್ವದಡಿ ಕಾರ್ಯ ನಿರ್ವಹಿಸುವ ಅವಕಾಶ ಒದಗಿ ಬಂದಿದೆ' ಎಂದು ಹೇಳಿದರು.