ಮಲಪ್ಪುರಂ, ಫೆ 06 (MSP): : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿದ್ದ , ಕನಕದುರ್ಗಾ ಅವರಿಗೆ ವಾಸಿಸಲು ಅವಕಾಶ ನೀಡುವಂತೆ ಆಕೆಯ ಪತಿ ಮನೆಯವರಿಗೆ ಸ್ಥಳೀಯ ಗ್ರಾಮ ನ್ಯಾಯಾಲಯ ಮಂಗಳವಾರ ಆದೇಶಿದೆ. ಜ.2 ರಂದು ಅಯ್ಯಪ್ಪ ದೇಗುಲ ಪ್ರವೇಶಿದ್ದ ಖುತುಮತಿ ವಯಸ್ಸಿನ ಮಹಿಳೆ ಕನಕದುರ್ಗಾ (44) ಅವರು ಮನೆಗೆ ಮರಳುತ್ತಿದ್ದಂತೆ ಅತ್ತೆ ಮತ್ತು ಮನೆಯ ಸದಸ್ಯರು ಹಲ್ಲೆ ನಡೆಸಿದ್ದರು.
ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಪುನಃ ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ಪತಿ ಮನೆಯಲ್ಲಿ ವಾಸಿಸಲು ತನಗೆ ಹಕ್ಕಿದೆ ಎಂದು ಪ್ರತಿಪಾದಿಸಿ ಕನಕದುರ್ಗಾ ಆತಂರಿಕ ಹಿಂಸಾಚಾರ ತಡೆ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದ್ದರು. ಈ ನಡುವೆ ಕನಕದುರ್ಗಾ ಹಾಗೂ ಬಿಂದು (೪೨) ಪ್ರವೇಶದ ಬಳಿಕ ದೇಗುಲಕ್ಕೆ ಬೀಗ ಹಾಕಿ ಶುದ್ದೀಕರಣ ಕಾರ್ಯ ಕೈಗೊಂಡಿದ್ದರ ಬಗ್ಗೆ ಆಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಆರ್ಚಕ ಕುಂದರಾರು ರಾಜೀವಾರು ಅವರು ತಿರುವಾಂಕೂರು ದೇವಸ್ವಣ್ ಮಂಡಳಿಗೆ ವಿವರಣೆ ನೀಡಿದ್ದಾರೆ.