ನವದೆಹಲಿ,ಫೆ 6(MSP): ಕಾಂಗ್ರೆಸ್ ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ವಾದ್ರಾ ಅವರಿಗಾಗಿ ನವದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಕೊಠಡಿಯೊಂದನ್ನು ರೆಡಿ ಮಾಡಲಾಗಿದೆ.
ಮಂಗಳವಾರ ಅದರ ಹೊರಗಡೆ ಪ್ರಿಯಾಂಕ ಗಾಂಧಿ ವಾದ್ರಾ ಎಂಬ ನಾಮಫಲಕವನ್ನು ಅಳವಡಿಸಲಾಗಿದೆ. ಈ ಹಿಂದೆ ಇದೇ ಕೊಠಡಿಯನ್ನು ಅಣ್ಣ ರಾಹುಲ್ ಗಾಂಧಿ ಬಳಸುತ್ತಿದ್ದರು.ಪ್ರಿಯಾಂಕಾ ಅವರು ಸೋಮವಾರವೇ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿ ಅಧಿಕೃತವಾಗಿ ಪಕ್ಷದ ಹುದ್ದೆಯನ್ನು ಸ್ವೀಕರಿಸಿಲಿದ್ದಾರ್ಎ. ಬಳಿಕ ಅವರು ಫೇಸ್ ಬುಕ್ ಮತ್ತು ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳಿಗೆ ಸೇರ್ಪಡೆಯಾಗುವ ನಿರೀಕ್ಷೆ ಇದೆ.
ಇನ್ನೊಂದೆಡೆ, ಉತ್ತರ ಪ್ರದೇಶದ ಉಸ್ತುವಾರಿ ವಹಿಸಿರುವ ಕಾರಣ ಲಕ್ನೋದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲೂ ಭರದ ಸಿದ್ದತೆ ನಡೇದಿದೆ. ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಸುತ್ತಿಒದ್ದ ಕೊಠಡಿಯನ್ನು ಈಗ ಪ್ರಿಯಾಂಕರಿಗೆ ನೀಡಲಾಗುತ್ತಿದ್ದು ವಾಸ್ತು ಶಾಸ್ತ್ರದ ಪ್ರಕಾರ ನವೀಕರಣ ಕಾರ್ಯ ನಡೆಯುತ್ತಿದೆ.