ಬೆಂಗಳೂರು,ಫೆ 6 (MSP): ವಿಧಾನಸಭೆ ಅಧಿವೇಶದ ಹಿನ್ನಲೆಯಲ್ಲಿ ರೆಸಾರ್ಟ್ ನಲ್ಲಿ ನಡೆದ ಗಲಾಟೆಯಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರಿಂದ ಒದೆ ತಿಂದಿದ್ದ ಶಾಸಕ ಆನಂದ್ ಸಿಂಗ್ ಅವಸರವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ನಡೆಯುವ ಅಧಿವೇಶಕ್ಕೆ ಅತೃಪ್ತ ಶಾಸಕರು ಗೈರು ಹಾಜರಿಯ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ತನ್ನೆಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದ್ದು, ಈ ಹಿನ್ನಲೆಯಲ್ಲಿ ಕಣ್ಣಿಗೆ ಗಾಯವಾಗಿದ್ದ ಅವರು ಕಪ್ಪು ಕನ್ನಡಕ ತೊಟ್ಟಿ ಸದನಕ್ಕೆ ಹಾಜರಾದರು.
ಜನವರಿ 20ರಂದು ಬೆಂಗಳೂರು ಹೊರವಲಯದ ಈಗಲ್ ಟನ್ ರೆಸಾರ್ಟ್ ನಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರೊಂದಿಗೆ ನಡೆದ ಗಲಾಟೆ ಸಂದರ್ಭ ಕಣ್ಣಿನ ಭಾಗದಲ್ಲಿ ಗಾಯಗೊಂಡಿದ್ದ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು.
ಕಾಂಗ್ರೆಸ್ ನಾಯಕರ ಆದೇಶದಂತೆ ಆಸ್ಪತ್ರೆಯಿಂದ ಅವಸರವಸರವಾಗಿ ಡಿಸ್ಚಾರ್ಜ್ ಆದ ಅವರು ಇಂದು ಸಚಿವ ಜಮೀರ್ ಅಹಮದ್ ಖಾನ್ ಅವರೊಂದಿಗೆ ಸದನಕ್ಕೆ ಆಗಮಿಸಿದ ಅವರು ಕಣ್ಣಿನ ಗಾಯ ಮರೆಮಾಚಲು ಕಪ್ಪು ಕನ್ನಡಕ ಧರಿಸಿದ್ದರು.