ಬೆಂಗಳೂರು, ಫೆ 6 (MSP): ದೋಸ್ತಿ ಸರ್ಕಾರ ಉಳಿಯುತ್ತಾ ಉರುಳುತ್ತಾ ಎನ್ನುವ ಆತಂಕದ ನಡುವೆಯೇ ರಾಜ್ಯ ವಿಧಾನ ಮಂಡಲ ಅಧಿವೇಶ ಆರಂಭವಾಗಿದ್ದು, ಸರಕಾರಕ್ಕೆ ಸಂಚಕಾರವಾಗಬಹುದೆಂಬ ಭಯದಲ್ಲಿಯೇ ಕಾಂಗ್ರೆಸ್ ತನ್ನೆಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿತ್ತು.
ಆದರೆ ಕುತೂಹಲಕಾರಿ ವಿಚಾರವೆಂದರೆ ಕಳೆದ ಕೆಲವು ದಿನಗಳಿಂದ ತಲೆ ಮರೆಸಿಕೊಂಡಿರುವ ಏಳು ಜನ ಕಾಂಗ್ರೆಸ್ ಶಾಸಕರು ಇಂದು ಸದನಕ್ಕೆ ಆಗಮಿಸಬಹುದೆಂಬ ಲೆಕ್ಕಾಚಾರವನ್ನು ತಲೆಗೆಳಗಾಗಿಸಿದ್ದಾರೆ. ಏಳು ಜನ ಶಾಸಕರು ಕೂಡಾ ಸದನಕ್ಕೆ ಹಾಜರಾಗದೆ ಕಾಂಗ್ರೆಸ್ ಪಕ್ಷದಲ್ಲಿ ನಡುಕ ಹುಟ್ಟಿಸಿದ್ದಾರೆ.
ಬಿ. ನಾಗೇಂದ್ರ, ಉಮೇಶ್ ಜಾಧವ್, ಗಣೇಶ್ ಜೆ.ಎನ್., ಮಹೇಶ್ ಕುಮಠಹಳ್ಳಿ, ಬಿ.ಸಿ. ಪಾಟೀಲ್, ರಾಮಪ್ಪ , ರಮೇಶ್ ಜಾರಕಿಹೊಳಿ ಇವೆರೆಲ್ಲರೂ ಕಾಂಗ್ರೆಸ್ ಶಾಸಕರಾಗಿದ್ದು ಸದನಕ್ಕೆ ಹಾಜರಾಗಿಲ್ಲ. ಇವರೊಂದಿಗೆ ಪಕ್ಷೇತರ ಶಾಸಕರಾಗಿರುವ ನಾಗೇಶ್ ಹೆಚ್. ಮತ್ತು ಮಾಜಿ ಸಚಿವ ಆರ್. ಶಂಕರ್ ಇವರು ಕೂಡ ಸದನಕ್ಕೆ ಗೈರು ಹಾಜರಾಗಿದ್ದಾರೆ.