ಬೆಂಗಳೂರು, ಫೆ 8(MSP): ಪ್ರತಿಪಕ್ಷದ ಗದ್ದಲದ ನಡುವೆ ಜೋರು ದ್ವನಿಯಲ್ಲಿ ಸಿಎಂ ಕುಮಾರಸ್ವಾಮಿ 2019-20 ನೇ ಸಾಲಿನ ಆಯವ್ಯಯ ಪತ್ರವನ್ನು ಸಿಎಂ ಕುಮಾರಸ್ವಾಮಿ ಮಂಡಿಸುತ್ತಿದ್ದಾರೆ. ಬಿಜೆಪಿ ಗಲಾಟೆ ಮುನ್ಸೂಚನೆಯ ದೊರೆತ ಹಿನ್ನಲೆಯಲ್ಲಿ ಬಜೆಟ್ ಮಂಡನೆಯ ಪ್ರಾರಂಭದಲ್ಲಿಯೇ ಸದನದ ಸದಸ್ಯರಿಗೆ ಮತ್ತು ಮಾಧ್ಯಮದವರಿಗೆ ಬಜೆಟ್ ಪ್ರತಿ ನೀಡದಿರಲು ನಿರ್ಧರಿಸಿದ್ದಾರೆ.
ರಾಜ್ಯದ ಅಭಿವೃದ್ದಿ ಬಗ್ಗೆ ನಮ್ಮ ದಾರಿ ಸ್ಪಷ್ಟವಾಗಿದೆ. ರಾಜ್ಯದ ಜನತೆಯ ಆಶಯ ಪೂರೈಸುವುದು ಹಾಗೂ ರಾಜ್ಯದ ರೈತರ ಸಮಗ್ರ ಅಭಿವೃದ್ದಿ ನಮ್ಮ ಗುರಿ ಎಂದು ಮಾತು ಆರಂಭಿಸಿ ಬಜೆಟ್ ಮಂಡಿಸಲು ಪ್ರಾರಂಭಿಸಿದ್ದಾರೆ.