ಬೆಂಗಳೂರು, ಫೆ 8(MSP): ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆಯ ತನ್ನ ತೀವ್ರತೆ ಹೆಚ್ಚಿಯನ್ನು ಹೆಚ್ಚಿಸಿಕೊಂಡಿದ್ದು, ಇದರ ಪರಿಣಾಮ ನೆರೆಯ ಜಿಲ್ಲೆಗಳಲ್ಲೂ ಮಂಗನ ಕಾಯಿಲೆ ಭೀತಿ ಹುಟ್ಟಿಸಿದೆ. ಮುಖ್ಯವಾಗಿ ಪಶ್ಚಿಮ ಘಟ್ಟದ ತಪ್ಪಲು ಜಿಲ್ಲೆ ಉಡುಪಿಯಲ್ಲಿ ಮಂಗಗಳ ಸಾವು ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಲೇ ಇವೆ. ಸಹಜವಾಗಿಯೇ ಇದು ಜನರಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ.
ಉಭಯ ಜಿಲ್ಲೆಗಳ ಪ್ರದೇಶವಾದ ಕಾರ್ಕಳ, ಕಡಬ, ಉಜಿರೆ, ಕುಂದಾಪುರ ಮುಂತಾದೆಡೆ ಅತಿ ಹೆಚ್ಚು ಮಂಗನ ಕಳೇಬರ ಪತ್ತೆಯಾಗಿದ್ದು, ಕರಾವಳಿ ಜಿಲ್ಲೆಯ ಜನತೆಯಲ್ಲಿ ಮಂಗನ ಕಾಯಿಲೆಯ ಭೀತಿ ಹುಟ್ಟಿಸಿದೆ. ಈ ನಡುವೆ ರಾಜ್ಯ ಸರ್ಕಾರ ಶುಕ್ರವಾರ ಮಂಡಿಸಿದ 2019- 20 ನೇ ಸಾಲಿನ ಆಯವ್ಯಯದಲ್ಲಿ ಮಂಗನ ಕಾಯಿಲೆ ಲಸಿಕೆ ತಯಾರಿಕೆಗೆ 5 ಕೋಟಿ ಅನುದಾನ ಮೀಸಲಿರಿಸಿ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಯ ಜನತೆಯನ್ನು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.