ಗುವಾಹಟಿ, ಫೆ 09(SM): ದೇಶದ ಬಹುತೇಕ ಜನತೆಯ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಗೆ ಗುವಾಹಟಿಯಲ್ಲಿ ದಿಕ್ಕಾರ ಎದುರಾಗಿದೆ. ಪೌರತ್ವ ತಿದ್ದುಪಡಿ ಮಸೂದೆ ಮೇಲಿನ ಅಸಮಾಧಾನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುವಾಹಟಿಯಲ್ಲಿ ಶನಿವಾರ ಕೂಡ ಕರಿ ಬಾವುಟ ತೋರಲಾಯಿತು.
ಈಶಾನ್ಯ ರಾಜ್ಯಕ್ಕೆ ಎರಡು ದಿನಗಳ ಭೇಟಿಯ ಅಂಗವಾಗಿ ಪ್ರಧಾನಿ ಮೋದಿ ಅವರು ಅಸ್ಸಾಂ ಗೆ ಫೆಬ್ರವರಿ ೮ರ ಶುಕ್ರವಾರ ತೆರಳಿದ್ದಾರೆ.
ಪ್ರಧಾನಿ ಮೋದಿಯವರು ನಿನ್ನೆ ಅಸ್ಸಾಂ ತಲುಪುತ್ತಿದ್ದಂತೆ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಕರಿ ಪತಾಕೆಗಳನ್ನು ಪ್ರದರ್ಶಿಸಿದರು. ಹಾಗೂ ಪ್ರಸ್ತಾವಿತ ಪೌರತ್ವ ಮಸೂದೆ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ನಿನ್ನೆಯ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ಮೋದಿಯವರು ಗುವಾಹಟಿಯ ಲೋಕಪ್ರಿಯ ಗೋಪೀನಾಥ್ ಬೋರ್ಡೋಲೋಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಕಾರಿನಲ್ಲಿ ತೆರಳುತ್ತಿರುವಾಗ ಮತ್ತೆ ಕಪ್ಪು ಬಾವುಟ ಪ್ರದರ್ಶನ ಹಾಗೂ ಪ್ರತಿಭಟನೆಗಳಳು ಎದುರಾದವು. ಇದರ ಮುಂದುವರೆದ ಭಾಗವೆಂಬಂತೆ ಪ್ರಧಾನಿಗಳಿಗೆ ಆಕ್ರೋಶಿತರು ಇಂದು ಕೂಡ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ.