ಗೋವಾ,ಫೆ 10 (MSP): ಮುಂದಿನ ಲೋಕಸಭೆ ಚುನಾವಣೆಯಲ್ಲಿ ’ಮಹಾಘಟ್ ಬಂಧನ್’ ಗೆದ್ದರೆ, ಮಹಾಮೈತ್ರಿಯಲ್ಲಿರುವ ಪ್ರತಿಯೊಂದು ಪಕ್ಷಗಳ ಒಬ್ಬೊಬ್ಬ ನಾಯಕರು ವಾರದ ಆರು ದಿನದಲ್ಲಿ ಒಂದೊಂದು ದಿನದಂತೆ ಪ್ರಧಾನ ಮಂತ್ರಿ ಹುದ್ದೆ ನಿಭಾಯಿಸಿ ಭಾನುವಾರ ದೇಶಕ್ಕೆ ರಜೆ ಕೊಟ್ಟುಬಿಡುತ್ತಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ವ್ಯಂಗ್ಯವಾಡಿದ್ದಾರೆ.
ಪಣಜಿಯಲ್ಲಿ ಬೂತ್ ಕಾರ್ಯಕರ್ತ ಸಮ್ಮೇಳನದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ, ವಿರೋಧ ಪಕ್ಷಗಳ ಮಹಾಮೈತ್ರಿಯ ಬಗ್ಗೆ ವಿಡಂಬನಾತ್ಮಕವಾಗಿ ಮಾತನಾಡಿದ ಅವರು, ಒಂದು ವೇಳೆ ವಿರೋಧಿಗಳು ಲೋಕಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಸೋಮವಾರ ಮಾಯಾವತಿ, ಮಂಗಳವಾರ ಅಖಿಲೇಶ್ ಯಾದವ್, ಬುಧವಾರ ಹೆಚ್ ಡಿ ದೇವೇಗೌಡ, ಗುರುವಾರ ಚಂದ್ರಬಾಬು ನಾಯ್ಡು, ಎಂ ಕೆ ಸ್ಟಾಲಿನ್ ಶುಕ್ರವಾರ ಮತ್ತು ಶರದ್ ಪವಾರ್ ಶನಿವಾರ ಪ್ರಧಾನಿಯಾಗುತ್ತಾರೆ. ಇನ್ನು ಭಾನುವಾರ ದೇಶಕ್ಕೆ ರಜೆ ಕೊಟ್ಟು ಅವರೆಲ್ಲರೂ ಹಾಯಾಗಿರುತ್ತಾರೆ ಎಂದು ಟೀಕಿಸಿದ್ದಾರೆ.
ಅದ್ದರಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡರು.