ಬೆಂಗಳೂರು, ಫೆ 10(SM): ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಕುತೂಹಲಗಳು ಎದುರಾಗುತ್ತಿವೆ. ಒಬ್ಬರು ಆಡಿಯೋ ಬಿಡುಗಡೆಗೊಳಿಸಿದರೆ ಮತ್ತೊಬ್ಬರು ವೀಡಿಯೋ ಬಿಡುಗಡೆಗೆ ಮುಂದಾಗಿದ್ದಾರೆ. ಈ ನಡುವೆ ಮೊದಲು ತಿರಸ್ಕರಿಸಿ ಬಳಿಕ ಧ್ವನಿ ನನ್ನದು ಎಂದು ಒಪ್ಪಿಕೊಂಡಿರುವ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
‘‘ರಾಜ್ಯದಲ್ಲಿ ಸಂವಿಧಾನಬದ್ಧ ಸರಕಾರ ರಚಿಸಲಾಗಿದೆ. ಸಮ್ಮಿಶ್ರ ಸರಕಾರ ಕಿತ್ತೆಸೆಯಲು ಯಡಿಯೂರಪ್ಪ ಷಡ್ಯಂತ್ರ ನಡೆಸುತ್ತಿದ್ದಾರೆ. ಅವರಿಗೆ ಒಂದು ರೀತಿಯಲ್ಲಿ ಅಧಿಕಾರದ ಹುಚ್ಚು ಹಿಡಿದಿದೆ’’ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಇನ್ನು ಆಡಿಯೋ ಬಿಡುಗಡೆಗೊಳಿಸಿದ ತಕ್ಷಣ ಆ ಆಡಿಯೋ ನನ್ನದ್ದಲ್ಲಿ ಎಂದು ಬಿಎಸ್ ವೈ ಹೇಳಿದ್ದರು. ಅಲ್ಲದೆ ಆಡಿಯೋವನ್ನು ಮಿಮಿಕ್ರಿ ಮಾಡಲಾಗಿದೆ ಎಂದು ಆರೋಪಿಸಿದ್ದರು. ಇದೀಗ ಮತ್ತೆ ತನ್ನದೇ ಎಂದು ಒಪ್ಪಿಕೊಂಡಿದ್ದು ಇದಕ್ಕೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.