ಬೆಂಗಳೂರು, ಫೆ 10(SM): ಶುಕ್ರವಾರದಂದು ಬಜೆಟ್ ಮಂಡನೆಗೂ ಮುನ್ನ ಸಿಎಂ ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದ ಯಡಿಯೂರಪ್ಪನವರ ಆಡಿಯೋವನ್ನು ಮೊದಲಿಗೆ ಬಿಎಸ್ ವೈ ತಿರಸ್ಕರಿಸಿದ್ದರು. ಆದರೆ ರವಿವಾರ ಆಡಿಯೋ ತನ್ನದೆಂದು ಬಿಎಸ್ ವೈ ಒಪ್ಪಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಕುಮಾರಸ್ವಾಮಿ, ಧರ್ಮಸ್ಥಳದ ಮಂಜುನಾಥ ಸ್ವಾಮಿಗಳು ಯಡಿಯೂರಪ್ಪಗೆ ಬುದ್ದಿ ಕೊಟ್ಟಿದ್ದಾರೆ. ನಿನ್ನೆ ತನಕ ಆಡಿಯೋ ತನ್ನದಲ್ಲ ಎನ್ನುತ್ತಿದ್ದರು. ಇದೀಗ ಏಕಾಏಕಿ ಒಪ್ಪಿಕೊಂಡಿದ್ದಾರೆ ಎಂದರು.
ಇನ್ನು ನಿನ್ನೆ ಧರ್ಮಸ್ಥಳಕ್ಕೆ ಬಂದಿದ್ದ ಸಿಎಂ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೆ ಆಡಿಯೋ ಬಗ್ಗೆ ಆಣೆ ಪ್ರಮಾಣಕ್ಕೆ ಕರೆ ನೀಡಿದ್ದರು. ಈ ಹಿನ್ನೆಲೆ ಮಂಜುನಾಥ ಸ್ವಾಮಿಗಳೇ ಯಡಿಯೂರಪ್ಪಗೆ ಒಳ್ಳೆಯ ಬುದ್ದಿಯನ್ನು ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.