ಮೈಸೂರು,ಫೆ 12 (MSP): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮೈಸೂರಿನ ನಜರಬಾದ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಯುವತಿ ಮೇಲೆ ಕಳೆದ ಭಾನುವಾರ ಫೆಬ್ರವರಿ 3 ರಂದು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಫೆ.8 ರಂದು ಮೈಸೂರಿನ ನಜರ್ ಬಾದ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಗ್ಯಾಂಗ್ ರೇಪ್ ನಲ್ಲಿದ್ದ ಆರೋಪಿ ಚಿರಾಗ್ ರೇಪ್ ಗೊಳಗಾದ ಯುವತಿಯ ಪರಿಚಯಸ್ಥನಾಗಿದ್ದು, ಆಕೆಯನ್ನು ಮನೆಗೆ ಬಿಡುವ ನೆಪದಲ್ಲಿ ಕೊಳ್ಳೇಗಾಲಕ್ಕೆ ತೆರಳುವ ರಸ್ತೆಯಲ್ಲಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆತನನೊಂದಿಗೆ ಮೂವರು ಯುವಕರು ಸೇರಿಕೊಂಡು ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಮೈಸೂರಿಗೆ ಹೊಸಬಳಾಗಿದ್ದ ಸಂತ್ರಸ್ತೆ ಯುವತಿ ಸಂಜೆ 7 ಗಂಟೆಯ ಸುಮಾರಿಗೆ ಮನೆಯಿಂದ ಊಟಕ್ಕಾಗಿ ಆಟೋದಲ್ಲಿ ಲಲಿತ್ ಮಹಲ್ ಪ್ಯಾಲೇಸ್ ರಸ್ತೆಯಲ್ಲಿರುವ ಚಾಟ್ ಸೆಂಟರ್ ಗೆ ಹೋಗಿದ್ದೆ. ಆದರೆ ಅಲ್ಲಿ ನನ್ನ ಗೆಳತಿ ಜೊತೆ ಚಾಟ್ಸ್ ತಿಂದು ನಂತರ ಮನೆಗೆ ವಾಪಾಸ್ ಆಗಲು ಡ್ರಾಪ್ ನೀಡುವಂತೆ ನನ್ನ ಸ್ನೇಹಿತನಾದ ಚಿರಾಗ್ ಗೆ ಕರೆ ಮಾಡಿ ಬರುವಂತೆ ತಿಳಿಸಿದ್ದೆ. ನಾನಿರುವ ಸ್ಥಳಕ್ಕೆ ಕಾರಿನಲ್ಲಿ ಬಂದು ನನ್ನನ್ನು ಹತ್ತಿಕೊಂಡು ಕೊಳ್ಳೇಗಾಲದ ರಸ್ತೆ ಬಳಸಿ ಹೋಗುತ್ತಿದ್ದನು. ಇದೇ ದಾರಿ ಮಧ್ಯೆ ಮೂವರು ಅಪರಿಚಿತರು ಕಾರಿನಲ್ಲಿ ಹತ್ತಿಕೊಂಡರು. . ಅವರೆಲ್ಲರೂ ಪಾನಮತ್ತರಾಗಿದ್ದು, ಮೈಸೂರಿಗೆ ಹೊಸಬಳಾಗಿದ್ದರಿಂದ ಸರಿಯಾದ ಮಾರ್ಗ ನನಗೆ ತಿಳಿದಿರಲಿಲ್ಲ. ನನ್ನನ್ನು ನಿರ್ಜನ ಪ್ರದೇಶದತ್ತ ಕೊಂಡೊಯ್ದು, ಕಾರಿನಲ್ಲಿದ್ದ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಬೇಡ್ಲ್ ನಿಂದ ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಸಂತ್ರಸ್ತೆ ಬಳಿಕ ಹೇಗೋ ಕಾಮುಕರಿಂದ ಪಾರಾಗಿ ಯುವತಿ ನಂತರ ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ ಆಸ್ಪತ್ರೆಯಿಂದಲೇ ಸ್ನೇಹಿತರ ಸಹಾಯದಿಂದ ದೂರು ದಾಖಲಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡ ನಜರಬಾದ್ ಠಾಣೆ ಪೊಲೀಸರು ಆರೋಪಿ ಚಿರಾಗ್ ನನ್ನು ಬಂಧಿಸಿದ್ದು, ಇತರೆ ಮೂವರಿಗಾಗಿ ಹುಡುಕಾಟ ನಡೆಸಿದ್ದಾರೆ.