ಉಡುಪಿ, ಫೆ 12 (MSP): ವೃತ್ತಿಪರ ಹ್ಯಾಕರ್ಗಳು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಅಕೌಂಟ್ ಹ್ಯಾಕ್ ಮಾಡಿ 20 ಲಕ್ಷ ರೂ. ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ 4 ದಿನಗಳ ಹಿಂದೆ ನಡೆದಿದ್ದು, ಮಂಗಳವಾರ ಅಕೌಂಟ್ ಹ್ಯಾಕ್ ಆದ ಬಗ್ಗೆ ತಿಳಿದುಬಂದಿದೆ. ದೆಹಲಿ ಪಾರ್ಲಿಮೆಂಟ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 20 ಲಕ್ಷ ರೂ. ಕಳವು ಮಾಡಿದ್ದಾರೆ. ಸಂಸದೆ ಶೋಭಾ ಅವರು ಮೊಬೈಲ್ನಿಂದ ತಮ್ಮ ನೆಟ್ ಬ್ಯಾಂಕಿಂಗ್ ಖಾತೆಯನ್ನು ನಿರ್ವಹಿಸುವಾಗ ಹ್ಯಾಕ್ ಮಾಡಿ ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ
ಈ ಸಂಬಂಧ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಸಂಸದೆ ಶೋಭಾ ಅವರು ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.