ಮುಂಬೈ, ಅ 06 (DaijiworldNews/DB): 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ಖ್ಯಾತಿಯ ಪರಾಗ್ ಕಾನ್ಸಾರ (51) ಬುಧವಾರ ವಿಧಿವಶರಾಗಿದ್ದಾರೆ.

ಪರಾಗ್ ಸ್ನೇಹಿತ ಮತ್ತು ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸುನಿಲ್ ಪಾಲ್ ಅವರು ಇದನ್ನು ಇನ್ಸ್ಟಾಗ್ರಾಮ್ನಲ್ಲಿ ಖಚಿತಪಡಿಸಿದ್ದಾರೆ. ಕಾಮಿಡಿ ಕ್ಷೇತ್ರದ ಮತ್ತೊಂದು ರತ್ನವನ್ನು ನಾವು ಕಳೆದುಕೊಂಡಿದ್ದೇವೆ. ಪರಾಗ್ ಕಂಸಾರಾ ಜೀ ನಮ್ಮ 'ಲಾಫ್ಟರ್ ಚಾಲೆಂಜ್' ಸಹ ಸ್ಪರ್ಧಿ ಸಾವನ್ನಪ್ಪಿದ್ದಾರೆ. ರಿವರ್ಸ್ ಥಿಂಕಿಂಗ್ ಕಾಮಿಡಿಗಳಿಂದ ನಮ್ಮನ್ನು ನಕ್ಕು ನಗಿಸುತ್ತಿದ್ದ ಪರಾಗ್ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂಬ ಸುದ್ದಿ ಹೇಳಲು ಸಂಕಟವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ರಾಜು ಶ್ರೀವಾಸ್ತವ, ದೀಪೇಶ್ ಭಾನ್, ಅಶೋಕ್ ಸುಂದ್ರಾನಿ ಮತ್ತು ಅನಂತ್ ಶ್ರೀಮಣಿ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಹಲವು ಮಂದಿ ಹಾಸ್ಯನಟರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಹಾಸ್ಯದ ಆಧಾರಸ್ಥಂಭಗಳು ಒಂದೊಂದಾಗಿ ಕಳಚಿಕೊಂಡು ದೂರ ಸರಿಯುತ್ತಿರುವುದು ಆಘಾತಕಾರಿಯಾಗಿದೆ. ರಾಜು ಶ್ರೀವಾಸ್ತವ್ ಸಾವಿನ ಸುದ್ದಿ ಮಾಸುವ ಮುನ್ನವೇ ಪರಾಗ್ ಸಾವು ಸಂಭವಿಸಿದ್ದು, ಆಘಾತಕಾರಿಯಾಗಿದೆ ಎಂದವರು ಹೇಳಿರುವುದಾಗಿ ವರದಿಯಾಗಿದೆ.