ಜಾರ್ಖಂಡ್,ಫೆ 13 (MSP): ಪಿಎಫ್ಐ ಸಂಘಟನೆಯ ಸದಸ್ಯರು ಭಯೋತ್ಪಾದಕ ಸಂಘಟನೆ ಐಸಿಸ್ ನಿಂದ ಪ್ರಭಾವಿತರಾಗಿದ್ದಾರೆ ಎಂಬ ಆರೋಪದಲ್ಲಿ ಜಾರ್ಖಂಡ್ ಸರ್ಕಾರವೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಿದೆ.
ಜಾರ್ಖಂಡ್ ನ ಪಾಕುರ್ ಜಿಲ್ಲೆಯಲ್ಲಿ ಪಿಎಫ್ ಐ ಸಂಘಟನೆಯೂ ಹೆಚ್ಚು ಸಕ್ರಿಯವಾಗಿದೆ ಎಂದೂ ಸರಕಾರ ತಿಳಿಸಿದ್ದು, “ಕೇರಳದಲ್ಲಿ ಆರಂಭವಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು ಐಸಿಸ್ ನಿಂದ ಪ್ರಭಾವಿತರಾಗಿದ್ದಾರೆ. ದಕ್ಷಿಣ ಭಾರತೀಯ ರಾಜ್ಯಗಳಿಂದ ಪಿಎಫ್ ಐನ ಕೆಲ ಸದಸ್ಯರು ರಹಸ್ಯವಾಗಿ ಸಿರಿಯಾಕ್ಕೆ ತೆರಳಿದ್ದು, ಐಸಿಸ್ ಸೇರಿದ್ದಾರೆ” ಎಂದು ಸರಕಾರದ ಹೇಳಿಕೆ ತಿಳಿಸಿದೆ.
ಗೃಹ ಇಲಾಖೆಯ ಪ್ರಸ್ತಾವನೆಯನ್ನು ಕಾನೂನು ಇಲಾಖೆಯ ಒಪ್ಪಿಗೆಯ ಮೇರೆಗೆ 1908ರ ಅಪರಾಧ ಕಾನೂನು ತಿದ್ದುಪಡಿ ಕಾಯಿದೆಯ 16ನೇ ಸೆಕ್ಷನ್'ನಡಿ ನಿಷೇಧಗೊಳಿಸಲಾಗಿದೆ.ಫೆ.17ರಂದು ಜಾರ್ಖಂಡ್'ನ ಪಾಕುರ್ ಜಿಲ್ಲೆಯಲ್ಲಿ ಪಿಎಫ್'ಐ ಸಂಘಟನೆ ಸಂಸ್ಥಾಪಕ ದಿನವನ್ನಾಗಿ ಸಂಭ್ರಮಿಸಿಲು ಸಿದ್ದತೆ ನಡೆಸಿತ್ತು.
ಪಿಎಫ್ಐ ಭಾರತದಲ್ಲಿ ನ್ಯಾಷನಲ್ ಡೆವಲಪ್'ಮೆಂಟ್ ಪ್ರಂಟ್ ಗೆ ಉತ್ತರಾಧಿಕಾರಿಯಾಗಿ 2006ರಲ್ಲಿ ಸ್ತಾಪಿತವಾದ ಉಗ್ರವಾದಿ ಮತ್ತು ಉಗ್ರಗಾಮಿ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯಾಗಿದೆ.