ನವದೆಹಲಿ, ಫೆ 13 (MSP): ದೇಶದಾದ್ಯಂತ ಭಾರಿ ಚರ್ಚೆ ಹುಟ್ಟು ಹಾಕಿರುವ ರಫೇಲ್ ಡೀಲ್ ಕುರಿತ ಸಿಎಜಿ ವರದಿ ಸಂಸತ್ತಿನಲ್ಲಿ ಇಂದು ಪ್ರತಿಪಕ್ಷಗಳ ಗದ್ದಲ ಗಲಾಟೆಯ ನಡುವೆಯೇ ಮಂಡನೆ ಮಾಡಲಾಗಿದೆ. ಆದರೆ ವರದಿ ಮಂಡನೆಯಾಗುತ್ತಿದ್ದಂತೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸಿಎಜಿ ವರದಿ ಪೂರ್ವಗ್ರಹಪೀಡಿತ ಎಂದು ಆಕ್ಷೇಪ ವ್ಯಕ್ತಪಡಿಸಿ ಹೊರನಡೆದಿದೆ.
ಸಂಸತ್ ಹೊರಗೆ ಕಾಂಗ್ರೆಸ್ ಸಂಸದರು ಸೇರಿ, ಪ್ರತಿಭಟನೆ ನಡೆಸಿದರು. ಅಲ್ಲದೆ ರಫೇಲ್ ಒಪ್ಪಂದದ ಬಗ್ಗೆ ನರೇಂದ್ರ ಮೋದಿ ಸರ್ಕಾರ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಸಂಸದರು ಪ್ರತಿಭಟನೆಯ ಸಂದರ್ಭ ಕಾಗದದ ವಿಮಾನ ಹಾರಿಸಿ ತಮ್ಮ ಅಸಮಾಧಾನ ಹೊರಹಾಕಿದರು. ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ರಾಹುಲ್ ಗಾಂಧಿ ನೇತೃತ್ವದಲ್ಲಿ, ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಉಪಸ್ಥಿತರಿದ್ದರು.