ಕುಂದಾಪುರ,ಫೆ 15(MSP): ಗುರುವಾರ ಪಾಕಿಸ್ತಾನ ಪ್ರೇರಿತ ಕಾಶ್ಮೀರ ಉಗ್ರನೊಬ್ಬ ಬಾಂಬ್ ದಾಳಿ ನಡೆಸಿ ೪೨ ಸಿಆರ್ಪಿಎಫ್ ಯೋಧರ ಹತ್ಯೆಗೆ ಕಾರಣವಾಗಿರುವ ಘಟನೆಯನ್ನು ಕಾಂಗ್ರೆಸ್ ಪಕ್ಷವು ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದ್ದಾರೆ. ಅವರು ಶುಕ್ರವಾರ ಕಾಂಗ್ರೆಸ್ ಕಛೇರಿ ಇಂದಿರಾ ಪ್ರಿಯದರ್ಶಿನಿಯಲ್ಲಿ ಕರೆಯಲಾದ ಭಯೋತ್ಪಾದಕ ಕೃತ್ಯ ಖಂಡನಾ ಸಭೆಯಲ್ಲಿ ಮಾತನಾಡಿದರು.
ಗುರುವಾರ ನಡೆದ ಈ ಘಟನೆಯು ಕಾಶ್ಮೀರದಲ್ಲಿ ಕಳೆದ 20 ವರ್ಷಗಳಲ್ಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಜೀವದ ಹಂಗು ತೊರೆದು ದೇಶವನ್ನು ರಕ್ಷಿಸುವ ಯೋಧರ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಕೇಂದ್ರ ಸರ್ಕಾರ ಈಗಿಂದೀಗಲೇ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಗೋಪಾಲ್ ಕೃಷ್ಣ ಶೆಟ್ಟಿ, ಕೃಷ್ಣದೇವ ಕಾರಂತ, ನಾರಾಯಣ ಆಚಾರ್, ವಿನೋದ್ ಕ್ರಾಸ್ಟೊ, ಅಬ್ದುಲ್ಲಾ ಕೋಡಿ, ಚಂದ್ರಶೇಖರ ಶೆಟ್ಟಿ, ಧರ್ಮ ಪ್ರಕಾಶ್, ಶೋಭಾ ಸಚ್ಚಿದಾನಂದ, ಅಶೋಕ್ ಸುವರ್ಣ, ಕೇಶವ ಭಟ್, ಶಿವಾನಂದ ಕೆ. ಜ್ಯೋತಿ ಡಿ. ನಾಯ್ಕ್, ಚಂದ್ರಕಾಂತ ಖಾರ್ವಿ, ಹೇಮಾ ಪೂಜಾರಿ, ಅಶ್ಫಕ್ ಅಹಮ್ಮದ್, ಗಣೇಶ್ ಶೆಟ್ಟಿ, ಕೃಷ್ಣ ಮೊಗವೀರ, ವಿಠ್ಠಲ ಕಾಂಚನ್, ಅಣ್ಣಯ್ಯ ಪುತ್ರನ್, ಸದಾನಂದ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.