ಬಿಹಾರ,ಫೆ 15(MSP): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಉಗ್ರ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ 44 ಯೋಧರು ಹುತಾತ್ಮರಾದ ಘಟನೆಯ ಕುರಿತು, ಹುತಾತ್ಮ ಯೋಧನ ತಂದೆಯ ಮಾತುಗಳನ್ನು ಕರುಳು ಹಿಂಡುವಂತೆ ಮಾಡುತ್ತದೆ.
ನನ್ನ ಒಬ್ಬ ಮಗನನ್ನು ಉಗ್ರರ ಪೈಶಾಚಿಕ ಕೃತ್ಯದಿಂದ ಕಳೆದುಕೊಂಡಿದ್ದೇನೆ, ಆದರೆ ನನಗೆ ಇನ್ನೊಬ್ಬ ಮಗನಿದ್ದಾನೆ. ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಆತನನ್ನು ಕೂಡಾ ಈ ನೆಲದ ಸೇವೆಗಾಗಿ ಅರ್ಪಿಸುತ್ತೇನೆ ಪಾಕಿಸ್ತಾನ ಪ್ರತ್ಯುತ್ತರ ನೀಡಿ ಎಂದು ಬಿಹಾರ ಮೂಲದ ಹುತಾತ್ಮ ಯೋಧ ರತನ್ ಠಾಕೂರ್ ಅವರ ತಂದೆ ಆಕ್ರೋಶಿತರಾಗಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ಪಿಎಫ್ ಯೋಧರು ರಜೆ ಮುಗಿಸಿ ಸೇವೆಗೆ ಮರಳುತ್ತಿದ್ದಾಗ ಅವರ ಬಸ್ ಅನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟಿಸಿದ್ದು, ಕನಿಷ್ಠ 4೪ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ಪೈಶಾಚಿಕ ಕೃತ್ಯದ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಷ್ -ಇ - ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.