ಕಣ್ಣೂರು ಫೆ16: ಹದಿನಾರು ವರ್ಷ ಪ್ರಾಯದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಅರೋಪದಡಿಯಲ್ಲಿ ತಲಶ್ಶೇರಿ ಪೋಸ್ಕೊ ನ್ಯಾಯಾಲಯ ಕ್ರೈಸ್ತ ಧರ್ಮಗುರು ಫಾದರ್ ರೋಬಿನ್ ಅವರಿಗೆ ಇಪ್ಪತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
2016ರಲ್ಲಿ ಧರ್ಮಗುರು ರೋಬಿನ್ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದ್ದು ಗರ್ಭಿಣಿಯಾದ ಬಾಲಕಿಯು 2017 ಫೆಬ್ರವರಿ 7 ರಂದು ಮಗುವಿಗೆ ಜನ್ಮ ಕೊಟ್ಟಿದ್ದಳು.
ಪ್ರಕರಣದ ಸತ್ಯಾಸತ್ಯೆತೆಯನ್ನು ಪರಿಶೀಲಿಸಿದ ನ್ಯಾಯದೀಶರಾದ ಪಿ.ಎನ್ ವಿನೋದ್ ಅರೋಪ ಪಟ್ಟಿಯಲ್ಲಿದ್ದ ಇತರ ಐವರು ಧರ್ಮ ಭಗಿನಿಯರನ್ನು ಹಾಗೂ ಇಗರ್ಜಿಯ ಕಛೇರಿ ನಿರ್ವಾಹಕನನ್ನು ನಿರ್ಧೋಶಿಯೆಂದು ಘೋಷಿಸಿದರು. ಇದೇ ಸಂಧರ್ಭದಲ್ಲಿ ಮಗಳ ಮೇಲೆ ಧರ್ಮಗುರುವಿನಿಂದ ಅತ್ಯಾಚಾರ ನಡೆದಿದೆ ಎಂದು ತಿಳಿದೂ ಬಾಹ್ಯಾ ಶಕ್ತಿಗಳ ಒತ್ತಡಕ್ಕೆ ಮಣಿದು ಸಾಕ್ಷಿ ವಿಸ್ತರಣೆ ವೇಳೆ ಘಟನೆಯನ್ನು ನಿರಾಕರಿಸಿದ ಬಾಲಕಿಯ ಹೆತ್ತವರಿಗೂ ನ್ಯಾಯಲಯ ಶಿಕ್ಶೆ ವಿಧಿಸಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಯೇ ಕೆನಡಾಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಫಾದರ್ ರೋಬಿನ್ ರನ್ನು ಫೆಬ್ರವರಿ 17, 2017ರಂದು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದರು. ತನಿಖೆಯ ವೇಳೆ ಬಾಲಕಿಯ ಹೆತ್ತವರ ಮೇಲೆ ಒತ್ತಡ ಹೇರಿ ಶಿಕ್ಶೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಧರ್ಮಗುರುವಿನ ಆಪ್ತರಿಂದ ನಡೆದಿತ್ತಾದರೂ ಡಿಎನ್ ಎ ಪರೀಕ್ಶೆಯಲ್ಲಿ ಬಾಲಕಿಗೆ ಹುಟ್ಟಿದ ಮಗುವಿನ ಪಿತೃತ್ವ ಧರ್ಮಗುರುವಿಗೆ ಎಂದು ಸಾಬೀತಾಗಿತ್ತು.