ಮಂಡ್ಯ,ಫೆ 18 (MSP): ನಮ್ಮ ಯೋಧನನ್ನು ಆತ್ಮಾಹುತಿ ದಾಳಿ ನಡೆಸಿ ಕೊಂದ ಮಾದರಿಯಲ್ಲೆ ನಾನು ಆತ್ಮಾಹುತಿ ದಾಳಿ ನಡೆಸಿ ಉಗ್ರರನ್ನು ಕೊಲ್ಲಲು ಸಿದ್ದನಿದ್ದೇನೆ ಎಂದು ಯುವಕನೊಬ್ಬ ತನ್ನ ಹೇಳಿಕೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.
ಮಂಡ್ಯ ನಗರದ ಜಿ.ಚೇತನ್ (29) ಎಂಬಾತ ’ ಯೋಧರ ಸಾವಿನಿಂದ ನನ್ನ ರಕ್ತ ಕುದಿಯುತ್ತಿದೆ. ಪ್ರತೀಕಾರದ ಸೇಡಿಗೆ ಮನಸ್ಸು ಹಾತೊರೆಯುತ್ತಿದೆ. ದೇಶದ ಪರವಾಗಿ ಆತ್ಮಾಹುತಿ ಬಾಂಬ್ ದಾಳಿಗೆ ಸಿದ್ದನಿದ್ದೇನೆ. ಆ ನಿಟ್ಟಿನಲ್ಲಿ ನನ್ನನ್ನು ಉಪಯೋಗಿಸಿಕೊಳ್ಳುವವರು ಸಂಪರ್ಕಿಸಬಹುದು ಎಂದಿರುವ ವೀಡೀಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ,
ಯೋಧರ ತ್ಯಾಗ , ಬಲಿದಾನ ವ್ಯರ್ಥವಾಗಬಾರದು, ಪ್ರತೀಕಾರಕ್ಕಾಗಿ ಎಲ್ಲರೂ ಕಾತರರಾಗಿದ್ದಾರೆ. ಯಾರ ಮುಲಾಜಿಗೂ ಒಳಗಾಗದೆ ಉಗ್ರರು ಹಾಗೂ ಅವರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಹಲವು ಯುವಕರು ಈ ರೀತಿಯ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದು ಉಗ್ರರ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.