ಬೆಂಗಳೂರು,ಫೆ 20(MSP): ಲೋಕಸಭಾ ಚುನಾವಣೆಯಲ್ಲಿ ಪಕ್ಷೇತವಾಗಿ ಸ್ಪರ್ಧಿಸುವುದಾಗಿ ಇತ್ತೀಚೆಗೆ ಘೋಷಿಸಿಕೊಂಡಿದ್ದ ’ಜಸ್ಟ್ ಆಸ್ಕಿಂಗ್ ’ ಖ್ಯಾತಿಯ ನಟ ಪ್ರಕಾರ್ ರೈ, ಈಗ ತಮ್ಮನ್ನು ಬೆಂಬಲಿಸುವಂತೆ ಕಾಂಗ್ರೆಸ್ ನಾಯಕರ ದುಂಬಾಲು ಬಿದ್ದಿದ್ದಾರೆ. ಇದು ಕೈ ಪಕ್ಷದ ನಾಯಕರಿಗೆ ಇರಿಸು ಮುರಿಸು ತಂದಿದ್ದು, ರೈ ಅವರಿಗೆ ನಯವಾಗಿ ತಿರಸ್ಕರಿಸಿ ಕಳುಹಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಮಂಗಳವಾರ ಈ ವಿಚಾರವಾಗಿ ಮಾತನಾಡಿ , ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬೆಂಬಲಿಸುವಂತೆ ಪ್ರಕಾಶ್ ರೈ ನನ್ನ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದು, ಬೇಕಿದ್ದರೆ ಪಕ್ಶ ಸೇರಿ . ನಮ್ಮದು ರಾಷ್ಟ್ರೀಯ ಪಕ್ಷ ಬೆಂಬಲ ಕೊಡಲು ಸಾಧ್ಯವಿಲ್ಲ . ಇಂಥ ಕ್ಷೇತ್ರ ಬೇಕೆಂದರೂ ಆಗಲ್ಲ ಎಂದು ಹೇಳಿ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಇದರಿಂದ ರೈ ಅವರ ಆಸೆಗೆ ತಣ್ಣೀರಿ ಎರಚಿದಂತಾಗಿದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ರೈಅವರು ತಮಗೆ ಕಾಂಗ್ರೆಸ್ ಬೆಂಬಲ ನೀಡಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಇದೀಗ ಅವರ ನಿರೀಕ್ಷೆ ಹುಸಿಯಾಗಿದ್ದು ಹೀಗಾಗಿ ಅವರು ಇನ್ಮುಂದೆ ತಮ್ಮ ಸ್ವಂತ ಬಲದಿಂದಲೇ ಚುನಾವಣೆಯಲ್ಲಿ ಹೋರಾಡಬೇಕಿದೆ.