ಕಾರವಾರ,ಫೆ 20(MSP): ತಾಯಿಯ ಅಂತ್ಯಕ್ರಿಯೆ ಸಂದರ್ಭ ಚಿತೆಗೆ ಬೆಂಕಿ ಕೊಡುವ ವೇಳೆ ಮಗನೊಬ್ಬ ಹೃದಯಾಘಾತವಾಗಿ ಸಾವನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ಬುಧವಾರ ನಡೆದಿದೆ.
ಮೃತರನ್ನು ಕಾರವಾರ ತಾಲೂಕಿನ ಸಿದ್ಧರ ಗ್ರಾಮದ ನಿವಾಸಿ ಮಂಜುನಾಥ್ (49) ಎಂದು ಗುರುತಿಸಲಾಗಿದೆ. ಮಂಜುನಾಥ್ ಅವರ ತಾಯಿ ಸಾವಿತ್ರಿ ಕೊಳಂಬಕರ್ ಮಂಗಳವಾರವಷ್ಟೇ ನಿಧನರಾಗಿದ್ದರು.
ತಾಯಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮಂಜುನಾಥ್ ಅವರಿಗೆ ಅವರ ನಿಧನರಿಂದ ಶಾಕ್ ಗೆ ಒಳಗಾಗಿದ್ದರು.ಆದರೂ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ತಾಯಿ ಮೃತದೇಹಕ್ಕೆ ಅಗ್ನಿ ಸ್ಪರ್ಶಿಸಿದ ಸಂದರ್ಭ ಹೃದಯಾಘಾತದಿಂದ ತಾನೂ ಸಾವಿಗೀಡಾಗಿದ್ದಾರೆ.
ಮೃತದೇಹಕ್ಕೆ ಅಗ್ನಿ ಸ್ಪರ್ಶಿಸುವ ಸಂದರ್ಭ ಮಂಜುನಾಥ್ ಅವರಿಗೆ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚುವರಿ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಂಜುನಾಥ್ ಸಾವಿಗೀಡಾದ್ದಾರೆ.
ಮೃತರು ಪತ್ನಿ, ಹಾಗೂ ಇಬ್ಬರು ಮಕ್ಕಳಿಳನ್ನು ಅಗಲಿದ್ದಾರೆ. ಕಾರವಾರ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.